ನವನಿಹಾಳ ಸೀಮಾಂತರದಲ್ಲಿ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ರವಿವಾರ ಶುಭಾರಂಭಗೊಂಡಿತು.
Advertisement
ವಿಶಾಲವಾದ 51 ಎಕರೆ ಭೂಮಿಯಲ್ಲಿ ಏಳು ವರ್ಷಗಳ ಹಿಂದೆ ತಲೆ ಎತ್ತಿರುವ ಪುಟಪರ್ತಿ ಸಾಯಿಬಾಬಾ ಕೃಪಾಶೀರ್ವಾದದ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಶಾಲಾ ಆವರಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿರುವ ಇಂದಿನದಿನಗಳಲ್ಲಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಶ್ರೀ ಸತ್ಯಸಾಯಿ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ ಎಂದರು. ಸತ್ಯಸಾಯಿ ಮಾನವ ಅಭ್ಯುದಯ ಕುಲಪತಿ ಡಾ| ಎ.ಆರ್. ಮಂಜುನಾಥ, ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ
ಮಾತನಾಡಿ, ಮಾನವ ಅಭ್ಯುದಯ ವಿಶ್ವವಿದ್ಯಾಲಯ ವಿಶ್ವದಲ್ಲೇ ಪ್ರಥಮ. ನಗರ ಪ್ರದೇಶ ಬಿಟ್ಟು ಗ್ರಾಮೀಣ ಭಾಗದಲ್ಲಿ ವಿವಿ ಸ್ಥಾಪಿಸುವ ಮೂಲಕ ಸಂಸ್ಥೆ ಹಳ್ಳಿ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಮುಂದೆ ಬಂದಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ವಿವಿ ಹಾಗೂ ಶಾಲಾ-ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಊಟ, ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿ ಮುಗಿಸುವ ಬಡ ಮಕ್ಕಳಿಗೆ ನಮ್ಮ ಸಂಸ್ಥೆ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆ ಅವಕಾಶವಿದೆ ಎಂದು ಹೇಳಿದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ|
ಎಚ್.ಎಂ.ಮಹೇಶ್ವರಯ್ಯ, ಕುಲಪತಿ ಪಿ.ಡಿ.ಎನ್ ಶ್ರೀನಿವಾಸ್, ಮಧುಸೂದನ ನಾಯ್ಡು, ಟ್ರಸ್ಟ್ ಆಡಳಿತಾಧಿಕಾರಿ ಶಿವಸುಬ್ರಹ್ಮಣ್ಯಂ ಸದಸ್ಯರಾದ ಇಂದುಲಾಲ್ ಡಾ| ಸಾಯಿಲೀಲಾ, ಡಾ| ಮಂಜುನಾಥ, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಎಂ.ಬಿ ಅಂಬಲಗಿ, ಉಮೇಶ ಶೆಟ್ಟಿ , ರವಿ ಬಿರಾದಾರ, ವೈಜನಾಥ ತಡಕಲ್, ಶರಣು ಸಲಗರ, ಶಿವಪ್ರಭು ಪಾಟೀಲ, ಯಶ್ವಂತ ಅಷ್ಟಗಿ ಮುಂತಾದವರು ಇದ್ದರು. ಗಮನ ಸೆಳೆದ ವಿದೇಶಿಗರು
ನವನಿಹಾಳದಲ್ಲಿ ಸುಂದರವಾದ ವಿವಿ ಕಟ್ಟ ತಲೆ ಎತ್ತಲು ಸಹಾಯ ಮಾಡಿರುವ ವಿದೇಶಿಗರು ಸಮಾರಂಭದಲ್ಲಿ ಭಾಗವಹಿಸಿರುವುದು ಗಮನ ಸೆಳೆಯಿತು. ಅದರಲ್ಲೂ 20 ದೇಶಗಳಿಂದ ಆಗಮಿಸಿದ್ದ ವಿದೇಶಿ ಮಹಿಳೆಯರು ಸೀರೆ ಉಟ್ಟು, ಹಣೆಯಲ್ಲಿ ತಿಲಕವಿಟ್ಟುಕೊಂಡು ಗಮನ ಸೆಳೆದರು. ಭಾರತೀಯ ಸಂಸ್ಕೃತಿಯನ್ನು ಶ್ಲಾಘಿಸಿದರು. ವಿಶ್ವದ ಎಲ್ಲ ದೇಶದ ಮಹಿಳೆಯರು ಸೀರೆ ತೊಟ್ಟರೆ ಅತ್ಯಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.