Advertisement
ಶನಿವಾರ ಈ ವಿಷಯವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಸತ್ಯ ನಾರಾಯಣ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹೈಜಂಪ್ ಸ್ಪರ್ಧಿ ತಂಗವೇಲು ಮರಿಯಪ್ಪನ್ ಅವರಿಗೆ ತರಬೇತಿ ನೀಡಿದ್ದರು. ಈ ಸಲ ಪ್ರತಿಷ್ಠಿತ ದ್ರೋಣಾ ಚಾರ್ಯ ಗೌರವಕ್ಕೆ ಸತ್ಯನಾರಾಯಣ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಈ ಬೆನ್ನಲ್ಲೇ ಕೆಲವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಆಲಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅವರ ಹೆಸರನ್ನು ಶಿಫಾರಸು ಪಟ್ಟಿಯಿಂದ ಕಿತ್ತು ಹಾಕಲು ನಿರ್ಧರಿಸಿತು. ಸತ್ಯನಾರಾಯಣ ವಿರುದ್ಧದ ಪ್ರಕರಣ ಇನ್ನು ವಿಚಾರಣೆಯಲ್ಲಿದೆ. ಹೀಗಾಗಿ ಅವರ ಹೆಸರನ್ನು ಪ್ರಸ್ತುತ ವರ್ಷದ ದ್ರೋಣಾಚಾರ್ಯ ಪಟ್ಟಿಯಿಂದ ಕಿತ್ತು ಹಾಕ ಲಾಗುತ್ತಿದೆ. ಅವರು ಆರೋಪದಿಂದ ಮುಕ್ತರಾಗುವ ತನಕ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.
Advertisement
ದ್ರೋಣಾಚಾರ್ಯ ಪಟ್ಟಿಯಿಂದ ಸತ್ಯನಾರಾಯಣ ವಜಾ
06:45 AM Aug 20, 2017 | |
Advertisement
Udayavani is now on Telegram. Click here to join our channel and stay updated with the latest news.