Advertisement

ಫೈನಲ್ ನಲ್ಲಿ ಎಡವಿದ ಸಾತ್ವಿಕ್ ರಾಜ್ – ಚಿರಾಗ್ ಶೆಟ್ಟಿ

09:44 AM Oct 29, 2019 | Team Udayavani |

ಪ್ಯಾರಿಸ್: ಭಾರತದ ಹೊಸ ಬ್ಯಾಡ್ಮಿಂಟನ್ ಸ್ಟಾರ್ ಜೋಡಿ ಸಾತ್ವಿಕ್ ರೆಡ್ಡಿ- ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ರನ್ನರ್ ಅಪ್ ಆಗಿದ್ದಾರೆ. ಶನಿವಾರ ಮಧ್ಯರಾತ್ರಿ ನಡೆದ ಫೈನಲ್ ನಲ್ಲಿ ಮಾರ್ಕಸ್ ಫೆರ್ನಾಲ್ಡಿ- ಕೆವಿನ್ ಸುಕಮುಲ್ವೋ ವಿರುದ್ಧ ಭಾರತೀಯ ಜೋಡಿ ಸೋಲನುಭವಿಸಿತು.

Advertisement

ಸೆಮಿ ಫೈನಲ್ ನಲ್ಲಿ ಜಪಾನ್ ಜೋಡಿ ಹಿರೋಯುಕಿ ಎಂಡೋ- ಯುಟವಟನಬೆ ಜೋಡಿಯ ವಿರುದ್ದ ನೇರ ಸೆಟ್ ಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಭಾರತೀಯ ಜೋಡಿ ಇಲ್ಲಿ 18-21, 16-21 ಸೆಟ್ ಅಂತರದಿಂದ ಸೋಲನುಭವಿಸಿ ನಿರಾಶೆ ಅನುಭವಿಸಿದರು.

1983ರ ನಂತರ ಫ್ರೆಂಚ್ ಓಪನ್ ಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಖ್ಯಾತಿಗೆ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪಾತ್ರವಾಗಿದೆ. 1983ರಲ್ಲಿ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಫೈನಲ್ ಪ್ರವೇಶ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next