Advertisement

ಎನ್‌ಬಿಎ ಪ್ರಶಸ್ತಿ ಗೆದ್ದರೆ ಸತ್ನಾಮ್‌ ಚಿತ್ರದಲ್ಲಿ  ಉಚಿತ ನಟನೆ

03:45 AM Jan 24, 2017 | Team Udayavani |

ಹೊಸದಿಲ್ಲಿ: ಅಮೆರಿಕದ ಎನ್‌ಬಿಎನಲ್ಲಿ (ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಲೀಗ್‌) ಭಾಗವಹಿಸಿದ ಮೊದಲ ಭಾರತೀಯ ಬಾಸ್ಕೆಟ್‌ಬಾಲ್‌ ಕ್ರೀಡಾಪಟು ಸತ್ನಾಮ್‌ ಸಿಂಗ್‌. ಕೆಲ ದಿನಗಳ ಹಿಂದಷ್ಟೇ ತನ್ನ ಜೀವನಚರಿತ್ರೆಯನ್ನು ಬೆಳ್ಳಿತೆರೆಗೆ ತರುವುದಿದ್ದರೆ ನಾಯಕನಾಗಿ ಖ್ಯಾತ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ನಟಿಸಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು. 

Advertisement

ಈಗ ಸ್ವತಃ ಅಭಿಷೇಕ್‌ ಬಚ್ಚನ್‌, ಸತ್ನಾಮ್‌ಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಎಂದಿದ್ದಾರೆ. “ಆದರೆ ಎನ್‌ಬಿಎನಲ್ಲಿ ನೀವು ಪ್ರಶಸ್ತಿ ಗೆದ್ದರೆ ಸಂಭಾವನೆ ತೆಗೆದುಕೊಳ್ಳದೆ ಉಚಿತವಾಗಿ ನಿಮ್ಮ ಜೀವನಚರಿತ್ರೆಯ ಸಿನಿಮಾದಲ್ಲಿ ನಟಿಸುತ್ತೇನೆ. ನನಗೆ ನೀಡುವ ಹಣವನ್ನು ನೀವು ಸಮಾಜಸೇವೆಗೆ ನೀಡಬಹುದು’ ಎಂದಿದ್ದಾರೆ ಅಭಿಷೇಕ್‌. 

ಸತ್ನಾಮ್‌ ಅಮೆರಿಕದಲ್ಲಿ ನೆಲೆಸಿದ್ದು ಖ್ಯಾತ ಬಾಸ್ಕೆಟ್‌ಬಾಲ್‌  “ಡಲ್ಲಾಸ್‌ ಮಾವೆರಿಕ್‌’ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next