Advertisement

ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸತ್ನಮ್‌

10:10 AM Dec 09, 2019 | sudhir |

ಹೊಸದಿಲ್ಲಿ: ಕಳೆದ ತಿಂಗಳು ನಡೆದ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಬಾಸ್ಕೆಟ್‌ಬಾಲ್‌ ಆಟಗಾರ ಸತ್ನಮ್‌ ಸಿಂಗ್‌ ಭಾಮರ ಅವರನ್ನು ರಾಷ್ಟ್ರೀಯ ದ್ರವ್ಯ ವಿರೋಧಿ ದಳವು (ನಾಡಾ) ಅಮಾನತುಗೊಳಿಸಿದೆ. ಸತ್ನಮ್‌ ಅವರು 2015ರಲ್ಲಿ ಎನ್‌ಬಿಎ ತಂಡಕ್ಕೆ ಸೇರಿದ ಭಾರತದ ಮೊದಲ ಆಟಗಾರರಾಗಿದ್ದರು.

Advertisement

ದಕ್ಷಿಣ ಏಶ್ಯನ್‌ ಗೇಮ್ಸ್‌ಗಾಗಿ ಬೆಂಗಳೂರಿನಲ್ಲಿ ನಡೆದ ಸಿದ್ಧತಾ ಶಿಬಿರದ ವೇಳೆ ರಾಷ್ಟ್ರೀಯ ದ್ರವ್ಯ ವಿರೋಧಿ ದಳ ನಡೆಸಿದ ದ್ರವ್ಯ ಪರೀಕ್ಷೆಯಲ್ಲಿ 23ರ ಹರೆಯದ ಪಂಜಾಬ್‌ನ ಸತ್ನಮ್‌ ಸಿಕ್ಕಿಬಿದ್ದಿದ್ದರು. ಆದರೆ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಸತ್ನಮ್‌ ಅವರು ನಾನು ಕ್ಲೀನ್‌ ಆ್ಯತ್ಲೀಟ್‌ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next