Advertisement

ಸತೀಶ ಜಾರಕಿಹೊಳಿ ಮಾದರಿ ರಾಜಕಾರಣಿ: ನೀರಲಗಿ

03:38 PM Jun 03, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ಶೋಷಿತ ವರ್ಗಗಳ ಧ್ವನಿಯಾಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರಳತೆ ಅನುಕರಣೀಯವಾಗಿದ್ದು, ಮೂಢನಂಬಿಕೆ, ಅಂಧ ಶ್ರದ್ಧೆಗಳನ್ನು ಹೋಗಲಾಡಿಸಲು ಅನೇಕ ಪ್ರಗತಿಪರ ವಿಧಾಯಕ
ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಅವರೊಬ್ಬ ಮಾದರಿ ರಾಜಕಾರಣಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

Advertisement

ರಾಮಕೃಷ್ಣ ನಗರದಲ್ಲಿ ಶ್ರೀಶಕ್ತಿ ಮಕ್ಕಳ ತೆರೆದ ತಂಗುದಾಣದಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಆಯೋಜಿಸಿದ್ದ ಸತೀಶ ಅವರ 62ನೇ ಜನ್ಮದಿನದ ಅಂಗವಾಗಿ ಮಕ್ಕಳಿಗೆ ನೋಟ್‌ಬುಕ್‌ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

ಈ ಹಿಂದೆ ಸತೀಶ ಜಾರಕಿಹೊಳಿ ಅವರು ಕೈಗಾರಿಕಾ ಸಚಿವರಿದ್ದ ಸಂದರ್ಭದಲ್ಲಿ ಹಾವೇರಿಗೆ ಜಿಟಿಡಿಸಿ ತರಬೇತಿ ಕೇಂದ್ರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ ವೇಳೆ, ಸಚಿವ ಜಾರಕಿಹೊಳಿ ಅವರು ಹಾವೇರಿಗೆ ಟೂಲ್ಸ್‌ ರೂಂ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌ ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಸಹ ನೀಡಿದ್ದರು.

ಹಾವೇರಿಯಲ್ಲಿ ಆರಂಭವಾಗಲಿರುವ ಜಿಟಿಡಿಸಿ ತರಬೇತಿ ಕೇಂದ್ರ ಸತೀಶ ಜಾರಕಿಹೊಳಿ ಅವರ ಕೊಡುಗೆಯಾಗಿದೆ ಎಂದರು. ಹಾವೇರಿ ಸಮೀಪದ ನೆಲೋಗಲ್ಲ ಗುಡ್ಡದಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಜಿಟಿಡಿಸಿ ತರಬೇತಿ ಕೇಂದ್ರವು ನಿರ್ಮಾಣಗೊಂಡಿದ್ದು, ಕೈಗಾರಿಕೀಕರಣಕ್ಕೆ ತಕ್ಕಂತ ಉದ್ಯೋಗ ಸೃಷ್ಟಿಗೆ ತರಬೇತಿ ನೀಡುವ ಕಾರ್ಯವನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.

ಇಲ್ಲಿ ಆರಂಭಿಸಲಾಗಿರುವ ಡಿಪ್ಲೋಮಾ ಇನ್‌ ಟೂಲ್‌ ಆ್ಯಂಡ್‌ ಡೈಮೇಕಿಂಗ್‌ ಕೋರ್ಸ್‌ಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಪ್ರಸಕ್ತ ವರ್ಷದಿಂದ ತರಬೇತಿ ಕೇಂದ್ರವನ್ನು ಆರಂಭಿಸಲು ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸಂಬಂಸಿದ ಸಚಿವರ ಜೊತೆಗೆ ಮಾತನಾಡುವುದಾಗಿ ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಹರ ಕಾಂಗ್ರೆಸ್‌ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಪ್ರಮುಖರಾದ ಅಶೋಕ ಹರನಗಿರಿ, ಗುಡ್ಡನಗೌಡ ಅಂದಾನಿಗೌಡ್ರ, ಶಿವಬಸಪ್ಪ ತಳವಾರ, ಅಮೀರ ಶಿಡಗನಾಳ, ಇರ್ಷದ ಹೊಸಮನಿ, ಉಮರ ನದಾಫ್‌, ವಿನಯ್‌ ಪಾಲಂಕರ, ಇಮಾಮ ಮುಗದೂರ, ಕೋಟೆಪ್ಪ ಮಡಿವಾಳರ, ಮಹಮ್ಮದ್‌ ಜಂಗ್ಲಿಸಾಬನವರ, ಆಕಾಶ ಮಂಟಗಣಿ, ಭಾಷಾಸಾಬ ಕೋಳೂರ, ಜಮೀರ ಜಿಗರಿ, ಶಿದ್ದು ಪುರದ ಭಾಗವಹಿಸಿದ್ದರು. ಸತೀಶ ಜಾರಕಿಹೊಳಿ ಅವರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಬೂದಗಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next