Advertisement

ನಮ್ದೇ ಕಪ್‌ ಅಂದ್ರೆ ಸುಮಕ್ಕಾ; ಜೈ ಜೈ ಕಮ್ಲಾ ಅಂದ್ರಾ ಚೆಲುವಣ್ಣಾ

04:19 PM Mar 12, 2023 | Team Udayavani |

ಅಮಾಸೆ:ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಎಲ್‌ಗೋಗೂಮಾ ಸಾ… ಎಲೆಕ್ಸನ್‌ ಬಂತಲ್ವೇ ಅಂಗೇ ವಸಿ ಟೂರ್‌ ಮಾಡೂಮಾ ಅಂತಾ ಒಂಟೋಗಿದ್ದೆ ಸಾ…

ಚೇರ್ಮನ್ರು: ಅದ್ಸರಿ ಏನ್ಲಾ ಎಲೆಕ್ಸನ್‌ ಇಸೇಸಾ

ಅಮಾಸೆ: ಅತ್ಲಾಗೆ ಸುಮಕ್ಕೋರು ಕಮ್ಲ ಪಾಲ್ಟಿಗ್‌ ಜೈ ಜೈ ಅಂದ್ರೆ, ಬಾಂಬೆ ಬ್ಲೂ ಬಾಯ್‌ ನಾರಾಯಣ್‌ ಗೌಡ್ರು ಜೈ ಕೈ ಅಂತಾವ್ರೆ. ಇತ್ಲಾಕ್‌ ಪುಟ್ಟಣ್ಣೋರು ಸಿಟಿನಾಗೆ ಕಾಮನ್‌ಮ್ಯಾನ್‌ ಸುರೇಶ್‌ ಕುಮಾರಣ್ಣೋರ್ಗೆ ಅಮರ್ಕೊಂಡವ್ರೆ

Advertisement

ಚೇರ್ಮನ್ರು: ವಿಕ್ಟ್ರಿ ಸೋಮಣ್ಣೋರ್‌ ಸ್ಟೋರಿ ಏನ್ಲಾ

ಅಮಾಸೆ: ಅವ್ರು ಫುಲ್‌ ರಾಂಗ್‌ ಆಗೋಗವ್ರೆ. ರಾಜಾಹುಲಿ ಜತ್ಗೆ ಇನ್ನರ್‌ ಕ್ಲಾಷ್‌, ಸನ್‌ ಆಫ್ ರಾಜಾಹುಲಿ ವಿಜಯೇಂದ್ರ ಬಾಹುಬಲಿ ಜತ್ಗೆ ಡೈರೆಕ್ಸ್‌ ಕ್ಲಾಷ್‌, ಇಂಗೇ ಆದ್ರೆ ನನ್‌ ದಾರಿ ನಂಗೆ ಅಂತಾ ಹೇಳವ್ರಂತೆ

ಚೇರ್ಮನ್ರು: ಅಂಗಾರೆ ಅವ್ರು ಕಮ್ಲ ಬಿಡ್ತಾರಾ

ಅಮಾಸೆ: ಹೆಡ್‌ ಮಾಸ್ಟ್ರೆ ಅಮಿತ್‌ ಸಾ ಜತ್ಗೆ ಸೋಮಣ್ಣೋರ್ಗೆ ಲಿಂಕ್‌ ಐತೆ, ಸಂತೋಸ್‌ಜಿ ಅವ್ರೂ ಕಾಂಟಾಕ್ಟ್ನಾಗವ್ರೆ. ರಾಜಾಹುಲಿ ಸನ್‌ಗೆ ಟಿಕೆಟ್‌ ಕೊಟ್ರೆ ನನ್‌ ಮಗೀಗೂ ಕೊಡ್ರಿ ಅಂತಾ ಇವ್ರ್ ಡಿಮ್ಯಾಂಡು, ಎಲ್ಲೋ ಮಿಸ್‌ ಒಡೀತೈತೆ

ಚೇರ್ಮನ್ರು: ಬುದ್ವಂತ ಬಸಣ್ಣೋರು, ಕಟೀಲಣ್ಣೋರು ಏನ್‌ ಹೇಳವ್ರೆ

ಅಮಾಸೆ: ಬಸಣ್ಣೋರು ನಾನ್‌ ನಿನ್‌ ಬಿಟ್‌ಕೊಡಲ್ಲಾ ಸುಮ್ಕಿರು ಸೋಮಣ್ಣಾ ಅಂದವ್ರಂತೆ. ಕಟೀಲಣ್ಣೋರು, ನೀವ್‌ ನಮ್‌ ಸ್ಟಾರ್‌ ಮಾರ್ರೆ, ನಿಮ್ಮನ್ನು ಬಿಡೋದುಂಟಾ ಡೋಂಟ್‌ ವರಿ ಅಂತಾ ಕೂಲ್‌ ಮಾಡವ್ರಂತೆ. ಆದ್ರೆ ಸೋಮಣ್ಣೋರು, ರಾಜಾಹುಲಿ ಜತ್ಗೆ ಮೀಟಿಂಗ್‌ ಫಿಕ್ಸ್‌ ಮಾಡ್‌ಬುಡಿ ಅತ್ಲಾಗೆ

ಏನಾಯ್ತದೋ ನೋಡೇಬಿಡೋವಾ ಅಂಗಾ ಇಂಗಾ ಮಾತಾಡೇ ಬಿಡ್ತೀನಿ ಅಂದವ್ರಂತೆ

ಚೇರ್ಮನ್ರು: ಸಿವ್‌ಕುಮಾರಣ್ಣೋರು ಸುಮ್ಕವ್ರಾ

ಅಮಾಸೆ: ಈ ಗ್ಯಾಪ್‌ನಾಗೆ ಸೋಮಣ್ಣೋರ್ಗೆ ಆಫ‌ರ್‌ ಕೊಟ್ಟಿದ್ರಂತೆ. ಆದ್ರೆ ಸಿದ್ರಾಮಣ್ಣೋರ್‌ ಗ್ಯಾಂಗು ವರಾತಾ ತೆಗೀತಂತೆ. ಅದ್ಕೆ ಸುಮ್ಕಾದ್ರಂತೆ

ಚೇರ್ಮನ್ರು: ಅಂಗಾರೆ ಏನಾಗ್‌ಬೋದು

ಅಮಾಸೆ: ಸೋಮಣ್ಣೋರು ಆಲ್‌ ಪಾಲ್ಟಿ ಚೇರ್ಮನ್‌ ಇದ್ದಂಗೆ, ಎಲ್ಲೋದ್ರೂ ಗೆದ್‌ಕೋತಾರೆ. ಕಮ್ಲ -ಕೈ ಬುಟ್ರಾ ತೆನೆ ಕೈ ಬೀಸ್ತದೆ. ದೊಡ್‌ಗೌಡ್ರು ಎಂಟ್ರಿ ಕೊಟ್ರೆ ಎಲ್ರೂ ದಬ್ಟಾಕೋತಾರೆ. ಸೋಮಣ್ಣೋರು ಮೊದ್ಲೇ ಗೌಡ್ರಿಗೆ ಲವ್ಲೀ ಬಾಯ್‌ ನೋಡ್ಬೇಕ್‌ ಫೈನಲ್‌ ಜರ್ಕ್‌ ಎಂಗಿರ್ತದೆ ಅಂತಾ

ಚೇರ್ಮನ್ರು: ಮಂಡ್ಯಾದಾಗೆ ಸುಮಕ್ಕೋರು ಕಮ್ಲ ಕಡೀಕ್‌

ಹೋದ್ರೆ ವರ್ಕ್‌ ಔಟ್‌ ಆಯ್ತದಾ

ಅಮಾಸೆ: ಕಮ್ಲ ಪಾಲ್ಟಿನೋರ್ಗೆ ಫ‌ುಲ್‌ ವರ್ಕ್‌ ಔಟ್‌ ಆಗ್ತೇಂತೆ. ಸುಮಕ್ಕೋರ್ಗೆ ಏನಾಯ್ತದೆ ನೋಡ್ಬೇಕು.

ಚೇರ್ಮನ್ರು: ಸುಮಕ್ಕೋರು ಅಸೆಂಬ್ಲೀಗ್‌ ನಿಲ್ತಾರಾ

ಅಮಾಸೆ: ಇನ್ನೂ ಏನೂ ಫೈಸ್‌ ಆಗ್ಲಿಲ್ಲ, ಜಸ್ಟ್‌ ಸಪೋರ್ಟ್‌ ಟು ಕಮ್ಲ ಅಂತಾ ಹೇಳವ್ರೆ. ಇಸ್ಟೇಟ್‌ನಾಗೆ ಕಮ್ಲ ಗೌರ್‌ನ್ ಮೆಂಟ್‌ ಬಂದ್ರೆ ಸುಮಕ್ಕೋರು ಎಂಎಲ್ಸಿ ಆಗ್‌ಬುಟ್ಟು ಮಿನಿಸ್ಟ್ರೆ ಆಯ್ತಾರೆ, ಇಲ್ಲಾಂದ್ರೆ ಸೆಂಟ್ರಲ್‌ನಾಗೆ ಮಿನಿಸ್ಟ್ರೆ ಆಯ್ತಾರೆ ಅಂತಾನೂ ಫ‌ಸರ್‌ ಐತೆ.

ಚೇರ್ಮನ್ರು: ಇವಾಗ್‌ ನಮ್‌ ಚೆಲುವಣ್ಣೋರು ಸ್ಟೋರಿ ಏನ್ಲಾ

ಅಮಾಸೆ: ಎಂಪಿ ಎಲೆಕ್ಸನ್‌ನಾಗೆ ಸುಮಕ್ಕೋರ್ಗೆ ಫುಲ್‌ ಸಪೋರ್ಟ್‌ ಮಾಡಿದ್ರು, ನಾಗ್‌ಮಂಗ್ಲದಾಗೆ ಅವ್ರು ಸಪೋರ್ಟ್‌ ಮಾಡ್ತಾರೆ ನಮ್ದ ಕಪ್‌ ಅಂತಾ ಡ್ರೀಮ್‌ ನಾಗಿದ್ರು, ಇವಾಗ್‌ ಶಾಕ್‌ ಆಗವ್ರೆ.

ಚೇರ್ಮನ್ರು: ನಾರಾಯಣ್‌ಗೌಡ್ರು ಯಾಕ್ಲಾ ಕಮ್ಲ ಬುಡ್ತಾವ್ರೆ

ಅಮಾಸೆ: ಅಲ್ಲೇ ಇದ್ರೆ ಡೌಟು ಅಂತಾ ರಿಪೋರ್ಟ್‌ ಬಂದೈತಂತೆ. ಅತ್ಲಾಗೆ ತೆನೆ ಕ್ಯಾಂಡೇಟ್‌ ಫ‌ುಲ್‌ ಸ್ಟ್ರಾಂಗ್‌ ಅವ್ರೆ. ಅದ್ಕೆ ಕೈಗೆ ಜೈ ಅಂದವ್ರೆ.

ಚೇರ್ಮನ್ರು: ಯಾರ್ಯಾರ್‌ ಪಾಲ್ಟಿ ಚೇಂಚ್‌ ಮಾಡ್ತಾರ್ಲಾ

ಅಮಾಸೆ: ಬೇಜಾನ್‌ ಕಾಯ್ತಾವ್ರೆ. ಕೈ ಲಿಸ್ಟ್‌ ಅನೌನ್ಸ್‌ ಆದ್ಮೇಕೆ ರೆಬಲ್‌ ಸ್ಟಾರ್‌ ಸಿನ್ಮಾ ರಿಲೀಸ್‌ ಆಯ್ತದಂತೆ

ಚೇರ್ಮನ್ರು: ಕುಮಾರಣ್ಣೋರ್‌ ಏನ್‌ ಮಾಡ್ತಾವ್ರೆ

ಅಮಾಸೆ: ಅವ್ರು ಕೈ-ಕಮ್ಲ ಫೈಟ್‌ನಾಗೆ ನಂದೇ ಕಪ್‌ ಬ್ರದರ್‌. ನೋಡ್ತಾ ಇರಿ ಅಂತಾ ಕಣ್‌ಮಿಟ್‌ಕ್ಸ್‌ತಾವ್ರಂತೆ. ಅದೆಂಗೇ ಅಂತಾ ಎಲ್ರೂ ತಲೇಗ್‌ ಹುಳಾ ಬಿಟ್‌ಕಂಡವ್ರೆ

ಚೇರ್ಮನ್ರು: ಕುಮಾರಣ್ಣೋರ್‌ ಕ್ಯಾಲ್ಯುಕ್ಲೇಸನ್‌ ಏನ್ಲಾ

ಅಮಾಸೆ: ಕೈ-ಕಮ್ಲ ನೈಂಟಿ ದಾಟ್‌ಬಾರ್ಧು ಅನ್ನೋದ್‌ ಅಷ್ಟೇಯಾ. ಎಲ್ಡೂ ಪಾಲ್ಟಿನಾಗೆ ಟಿಕೆಟ್‌ ಸಿಕ್ಕಿಲ್ಲಾಂದ್ರೆ ಎಲ್ಡ್‌ ಡಜನ್‌ ಲೀಡ್ರು ತೆನೆ ಹಿಡೀತಾರಂತಾ ಪಸರ್‌ ಐತೆ. ಆವಾಗ್‌ ಕುಮಾರಣ್ಣೋರ್‌ ಕ್ಯಾಲ್ಯುಕ್ಲೇಸನ್‌ ಪಕ್ಕಾ

ಚೇರ್ಮನ್ರು: ರೇವಣ್ಣೋರ್‌ ಸೌಂಡೇ ಇಲ್ಲಾ , ಅಕ್ಕೋರ್ಗೇ ಟಿಕೆಟ್‌ ಪಕ್ಕಾ ಆಯ್ತೇನ್ಲಾ

ಅಮಾಸೆ: ಕುಮಾರಣ್ಣೋರು ಹಾಸ್ನ ಸಾವಾಸಾ ಬ್ಯಾಡಾ, ಎಲ್ಲಾ ಅವ್ರ್ ದೇ ಅಂತಾ ಹೇಳಿದ್‌ಮ್ಯಾಕೆ, ಸ್ವರೂಪಣ್ಣೋರು ಜತ್ಗೆ ಟಾಕಿಂಗ್‌ ಮಾಡ್ತಾವ್ರೆ. ನಿಂಕೆ ಗುಡ್‌ ಫ್ಯೂಚರ್‌ ಐತೆ ಸುಮ್ಕಿರು ಅಂತಾ ಐಸ್‌ ಇಟ್ಟವ್ರಂತೆ. ಏನೇನಾಯ್ತದೋ ನೋಡುಮಾ. ನನ್‌ ಹೆಂಡ್ರು ತಲೆ ಮಾಂಸಾ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…

 ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next