Advertisement

ಸತ್ಕಾರ ಪುರುಷ ಸಕ್ಕರೆ ಕರಡೀಶ ಚಿತ್ರೀಕರಣಕ್ಕೆ ಚಾಲನೆ

03:01 PM Oct 18, 2021 | Team Udayavani |

ಬಳ್ಳಾರಿ: ದಾಸೋಹಿ, ಸತ್ಕಾರ ಪುರುಷ ಸಕ್ಕರೆ ಕರಡೀಶರ ಜೀವನಾಧಾರಿತ ಚಲನಚಿತ್ರದ ಚಿತ್ರೀಕರಣಕ್ಕೆ ನಗರದ ಮರಿಸ್ವಾಮಿಗಳ ಮಠದಲ್ಲಿ ಮರಿಸ್ವಾಮಿಗಳ ಗದ್ದುಗೆ ಬಳಿ ಚಾಲನೆ ನೀಡಲಾಯಿತು.

Advertisement

ಕರಡೀಶರ ಪಾತ್ರ ನಿರ್ವಹಿಸುತ್ತಿರುವ ರಮೇಶ್‌ ಗೌಡ ಪಾಟೀಲ್‌ ಅವರ ಸನ್ನಿವೇಶ ಚಿತ್ರೀಕರಿಸುವ ಮೂಲಕ ಚಾಲನೆ ನೀಡಲಾಯಿತು. ಸಕ್ಕರೆ ಕರಡೀಶ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾವಿನಾಳ ಬಸವರಾಜ ಅವರು ಕ್ಲಾಪ್‌ ಮಾಡಿ, ಕಲ್ಯಾಣಸ್ವಾಮಿ ಮಠದ ಸ್ವಾಮೀಜಿಗಳು ಕ್ಯಾಮೆರಾ ಸ್ವಿಚ್‌ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ರೋಹಿತ್‌ ಫಿಲಂಸ್‌ ಬೆಂಗಳೂರು ಸಂಸ್ಥೆಯಡಿ ನಿರ್ಮಾಣಗೊಳ್ಳುತ್ತಿರುವ ಕರಡೀಶ ಚಿತ್ರಕ್ಕೆ ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಆಕ್ಷನ್‌ ಕಟ್‌ ಹೇಳಲಿದ್ದು, ಅವರ ಪತ್ನಿ ಉಷಾ ಪುರುಷೋತ್ತಮ ಚಿತ್ರದ ನಿರ್ಮಾಣದ ಸಾರಥ್ಯ ವಹಿಸಿಕೊಂಡಿದ್ದಾರೆ.

ಚಿತ್ರಕ್ಕೆ ಚೆನ್ನೈನ ರಾಜ್‌ ಭಾಸ್ಕರ್‌ ಸಂಗೀತ ನೀಡಲಿದ್ದು, ಮುತ್ತುರಾಜ್‌ ಕ್ಯಾಮೆರಾಮೆನ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನಂತರ ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕ್ಕರೆ ಕರಡೀಶರು ಬಳ್ಳಾರಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೂಲತಃ ಗುತ್ತಿಗೆದಾರರಾಗಿದ್ದ ಕರಡೀಶರು, ಬ್ರಿಟೀಷ ಆಡಳಿತದಲ್ಲೇ ಗುತ್ತಿಗೆ ಪಡೆದು ಬಳ್ಳಾರಿ ರೈಲು ನಿಲ್ದಾಣ, ಜಿಲ್ಲಾ ಧಿಕಾರಿ ಕಚೇರಿ, ಬೀದಿ ದೀಪಗಳು, ಸುಸಜ್ಜಿತ ರಸ್ತೆಗಳು ಸೇರಿದಂತೆ ಇನ್ನಿತರೆ ಹಲವು ಕಟ್ಟಡಗಳನ್ನು ನಿರ್ಮಿಸಿದ್ದು, ಅಂದಿನ ಕಟ್ಟಡಗಳು ಇಂದಿಗೂ ನಿದರ್ಶನವಾಗಿ ಉಳಿದಿವೆ. ಅವರು ದುಡಿದ ಹಣವನ್ನೆಲ್ಲ ಜನರಿಗೆ, ಸಮಾಜಕ್ಕಾಗಿ ಖರ್ಚು ಮಾಡಿದ್ದಾರೆ. ಆ ಕಾಲದಲ್ಲಿ ಬರ ಆವರಿಸಿದಾಗ ತಿಂಗಳುಗಟ್ಟಲೆ ದಾಸೋಹ ಮಾಡಿದ ಕೀರ್ತಿ ಕರಡೀಶರಿಗೆ ಸಲ್ಲುತ್ತದೆ ಎಂದರು.

ಅಂದಿನ ಕಾಲದಲ್ಲಿ ಸಂಸ್ಕೃತ ಕಲಿಯಬೇಕಾದರೆ ಕಾಶಿಗೆ ಹೋಗಬೇಕಿತ್ತು. ಅಂತಹ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸಿದವರಲ್ಲಿ ಕರಡೀಶರು ಮೊದಲಿಗರಾಗಿದ್ದು, ಮೈಸೂರು ಸಂಸ್ಥಾನದಿಂದ ಐವರು ಸಂಸ್ಕೃತ ಶಿಕ್ಷಕರನ್ನು ಕರೆತಂದು ಇಲ್ಲಿನ ಜನರು ಸಂಸ್ಕೃತ ಕಲಿಯುವಂತೆ ಮಾಡಿದ್ದರು. ಅಂತಹ ಸತು³ರುಷರ ಜೀವನವನ್ನು ಬೆಳ್ಳಿ ಪರದೆಯ ಮೇಲೆ ಮೂಡಿಸಲಾಗುತ್ತದೆ ಎಂದರು. ಕರಡೀಶರು ಬಳ್ಳಾರಿಯವರೇ ಆಗಿದ್ದರಿಂದ ಇಲ್ಲಿನ ಕರಡೀಶ ಚೌಕಿ, ಸಂಸ್ಕೃತ ಪಾಠ ಶಾಲೆ ಇನ್ನಿತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಇನ್ನುಳಿದಂತೆ ಬೆಂಗಳೂರಿನಲ್ಲಿ ಸೆಟ್‌ಗಳನ್ನು ಹಾಕಿಕೊಂಡು ಚಿತ್ರೀಕರಣ ನಡೆಸಿ 40ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ಫೆಬ್ರವರಿ ತಿಂಗಳಲ್ಲಿ ಚಿತ್ರದ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಚಿತ್ರದಲ್ಲಿ ಐದು ಹಾಡುಗಳು ಇರಲಿದ್ದು, 1.5 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುವುದು. ಚಿತ್ರಕ್ಕೆ ಕರಡೀಶ ಪಾತ್ರಧಾರಿ ರಮೇಶ್‌ ಗೌಡ ಪಾಟೀಲ್‌ ಅವರು ಸಹ ಬಂಡವಾಳ ಹೂಡಿದ್ದು, ರಂಗಭೂಮಿ ಕಲಾವಿದ, ಅನುಭವಿಗಳಾಗಿದ್ದರಿಂದ ಚಿತ್ರದ ಮುಖ್ಯಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಇದಕ್ಕೂ ಮುನ್ನ ಆರು ತಿಂಗಳ ಹಿಂದೆ ಚೇಳ್ಳಗುರ್ಕಿ ಎರ್ರಿಸ್ವಾಮಿ, ಅಲ್ಲೀಪುರ ಮಹಾದೇವತಾತರ ಕುರಿತ ಚಲನಚಿತ್ರಗಳನ್ನು ಚಿತ್ರೀಕರಿಸಿದ್ದು, ಇದೇ ಡಿಸೆಂಬರ್‌ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ವರೆಗೆ 22 ಆಧಾತ್ಮಿಕ ಚಿತ್ರ ನಿರ್ದೇಶಿಸಿದ್ದು, ಮಹಾಶರಣ ಹರಳಯ್ಯ ಚಿತ್ರಕ್ಕೆ ಉತ್ತಮ ನಿರ್ದೇಶನ ಸೇರಿ ಒಟ್ಟು 6 ಪ್ರಶಸ್ತಿಗಳು ಲಭಿಸಿವೆ ಎಂದು ವಿವರಿಸಿದರು.

ಚಿತ್ರೀಕರಣ ಪ್ರಾರಂಭೋತ್ಸವದಲ್ಲಿ ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ವೀರಶೈವ ಸಮುದಾಯದ ಹಾವಿನಾಳ್‌ ಶರಣಪ್ಪ, ಪಲ್ಲೇದ ದೊಡ್ಡಪ್ಪ, ಟಿ.ಸಿ.ಗೌಡ, ಬೈಲುವದ್ದಿಗೇರಿ ಎರ್ರಿಸ್ವಾಮಿ, ಕೋರಿ ವಿರೂಪಾಕ್ಷಿ, ಗುತ್ತಿಗನೂರು ವಿರೂಪಾಕ್ಷಗೌಡ, ರಾಘವ ಕಲಾ ಮಂದಿರದ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ ಪಾಲ್ಗೊಂಡಿದ್ದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ಉಷಾ, ಮುಖ್ಯಪಾತ್ರಾಧಾರಿ ರಮೇಶ್‌ಗೌಡ ಪಾಟೀಲ್‌, ಅವರ ಪತ್ನಿ ಗಂಗಮ್ಮ ಪಾಟೀಲ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next