Advertisement

ನಮ್ಮ ಗುಪ್ತಚರ ವರದಿ ಕೈಕೊಟ್ಟಿರುವುದಕ್ಕೆ ಕ್ಷೇತ್ರ ಕಳೆದುಕೊಂಡಿದ್ದೇವೆ: ಸತೀಶ್ ಜಾರಕಿಹೊಳಿ

08:18 PM Jun 05, 2024 | Team Udayavani |

ಬೆಳಗಾವಿ: ನಾವು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದರೆ ನಮ್ಮ ನಾಯಕ ಮತ್ತು ನಿರ್ದೇಶಕರು ಸರಿಯಾಗಿ ಮಾರ್ಗದರ್ಶನ ಮಾಡಬೇಕು ಜೊತೆಗೆ ಆಕ್ಷನ್ – ಕಟ್ ಸರಿಯಾಗಿ ಕೊಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Advertisement

ನಿರ್ದೇಶಕರೆ ಟೋಪಿ ಹಾಕಿಕೊಂಡು ಎಲ್ಲೋ ಕುಳಿತರೆ ಎಲ್ಲವೂ ದಾಟಿ ಹೋಗುತ್ತದೆ. ಇದು ಚುನಾವಣೆ. ಇಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ಒಬ್ಬರೇ. ಸರಿಯಾಗಿ ನಿರ್ದೇಶನ ಹಾಗೂ ಚಿತ್ರಕಥೆ ಕೊಡಬೇಕು. ಸ್ವಲ್ಪ ನಿರ್ಲಕ್ಷ ಮಾಡಿದರೂ ಸೋಲಾಗುತ್ತದೆ.

ಕೆಲವು ಕಡೆ ನಿರ್ಲಕ್ಷವಾಗಿದೆ. ಅತಿಯಾದ ಆತ್ಮವಿಶ್ವಾಸ ಕೈಕೊಟ್ಟಿದೆ. ಅವರವರ ಕ್ಷೇತ್ರದಲ್ಲೇ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಯಾರು ಗೆಲ್ಲಿಸುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಂಡವರ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂದು ಪರೋಕ್ಷವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರಗೆ ಟಾಂಗ್ ನೀಡಿದರು.

ಬೆಳಗಾವಿಯಲ್ಲಿ ನಮ್ಮ ತಪ್ಪು ವರದಿಯಿಂದ ನಾವು ಸಂಪೂರ್ಣ ವಿಫಲವಾಗಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಆದರೆ ನಾವು ಮಹತ್ವದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದ್ದೇವೆ.

ಮುಖ್ಯವಾಗಿ ಎದುರಾಳಿಯ ಶಕ್ತಿಯನ್ನು ನಾವು ಅರಿಯುವಲ್ಲಿ ಸೋತಿದ್ದೇವೆ. ನಮ್ಮ ಗುಪ್ತಚರ ವರದಿ ಕೈಕೊಟ್ಟಿದೆ. ಇದೇ ಕಾರಣದಿಂದ ನಾವು ಕ್ಷೇತ್ರ ಕಳೆದುಕೊಂಡಿದ್ದೇವೆ.

Advertisement

ನಾವು ಈ ಬಾರಿ ಕೇವಲ ಗೆಲ್ಲುವದಕ್ಕಷ್ಟೇ ತಂತ್ರಗಾರಿಕೆ ಮಾಡಿದ್ದೇವೆ. ಸೋಲಿನಲ್ಲಿ ನಮ್ಮ ಯಾವುದೇ ರೀತಿಯ ಪಾತ್ರ ಇಲ್ಲ.

ಬೆಳಗಾವಿ ಕ್ಷೇತ್ರದಲ್ಲಿ ಐದು ಲಕ್ಷ ಜನ ಲಿಂಗಾಯತರಿದ್ದಾರೆ. ಹೀಗಿದ್ದರೂ ಸೋತಿದ್ದೇಕೆ ಎಂಬುದರ ಬಗ್ಗೆ ಅವರೇ ಹೇಳಬೇಕು ಎಂದು ಹೆಬ್ಬಾಳಕರಗೆ ಟಾಂಗ್.

ಐದು ಲಕ್ಷ ಲಿಂಗಾಯತರಿರುವಾಗ ಮನಸ್ಸು ಮಾಡಿದರೆ ನಿರಾಯಾಸವಾಗಿ ಗೆಲ್ಲಿಸಬೇಕಿತ್ತು. ಲಿಂಗಾಯತರು ಜಾರಕಿಹೊಳಿ ಸಹೋದರರ ಮಾತು ಕೇಳುತ್ತಾರೆಯೇ. ಇಲ್ಲಿಯೇ ನಾವು ಮೊದಲು ತಪ್ಪು ಮಾಡಿದ್ದೇವೆ. ನಮ್ಮ ಲೆಕ್ಕಾಚಾರ ತಪ್ಪಿದೆ.

ಲಿಂಗಾಯತರನ್ನು ಅಂದಾಜಿಸಲು ನಾವು ಹಿಂದೆ ಬಿದ್ದಿದ್ದೇವೆ, ಇದಕ್ಕೆ ಕೆಲ ಶಾಸಕರು ಸಹ ಕಾರಣ ಇರಬಹುದು

ಇದನ್ನೂ ಓದಿ: ‘ಗ್ಯಾರಂಟಿ’ ಕೈ ಹಿಡಿಯುವ ನಿರೀಕ್ಷೆ ಹುಸಿಯಾಗಿದೆ, ಸೋಲಿನ ಕುರಿತು ವರಿಷ್ಠರಿಗೆ ವರದಿ: ಆಲಗೂರ

Advertisement

Udayavani is now on Telegram. Click here to join our channel and stay updated with the latest news.

Next