Advertisement

Haveri; ಮೋದಿ‌ ಅಲೆಗಿಂತ ಬಿಜೆಪಿ ಅಲೆ ಹೆಚ್ಚಿತ್ತು: ಆನಂದಸ್ವಾಮಿ ಗಡ್ಡದೇವರಮಠ

03:52 PM Jun 11, 2024 | Team Udayavani |

ಹಾವೇರಿ: ಹಾವೇರಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಆಶೀರ್ವಾದವನ್ನು ಕೈ ನಾಯಕರು ಕೊಡಿಸಿದ್ದಾರೆ. ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಆಶೀರ್ವಾದ ಕೊಡಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಮತ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಜೊತೆ ಸಾಮಾನ್ಯ ಕಾರ್ಯಕರ್ತನಾಗಿ ಜೊತೆ ಇರುತ್ತೇನೆ. ಚುನಾವಣೆಯಲ್ಲಿ ರಣತಂತ್ರಗಳು ನಡೆಯುತ್ತವೆ. ಹೊಂದಾಣಿಕೆ ರಾಜಕಾರಣ ಇಲ್ಲಿ ನಡೆದಿಲ್ಲ. ಹೊಂದಾಣಿಕೆ ರಾಜಕಾರಣ ನಡೆದಿದ್ದರೆ ನನಗೆ 6 ಲಕ್ಷ 60 ಸಾವಿರ ಮತಗಳು ಬರುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಸಿಕ್ಕಿದೆ ಎಂದರು.

ಗದಗನಲ್ಲಿ 16 ಸಾವಿರ ಅಂತರವಾಗಿದೆ, ಇದನ್ನ ಎಲ್ಲಿಯೂ ಮುರಿಯಲು ಸಾಧ್ಯವಾಗಿಲ್ಲ. ಹಿಂದಿನ‌ ಚುನಾವಣೆಯಲ್ಲಿಯೂ ಗದಗದಲ್ಲಿ ಕಡಿಮೆ ಮತಗಳು ಬಂದಿತ್ತು. ನಮ್ಮ‌ ಸೋಲು ದೊಡ್ಡದಲ್ಲ, ಅಂತರ ಕಡಿಮೆಯಿದೆ. ಶಹರದ ಟ್ರೆಂಡ್ ನಿಂದ ಸೋಲಾಗಿದೆ. ಶಹರದಲ್ಲಿ ಮೋದಿ‌ ಅಲೆಗಿಂತ ಜನರ ಬಿಜೆಪಿ ಅಲೆಯಿತ್ತು ಎಂದು ಗಡ್ಡದೇವರಮಠ ಹೇಳೀದರು.

ಶಿಗ್ಗಾವಿ ಬೈ ಎಲೆಕ್ಷನ್ ನಲ್ಲಿ ಗಡ್ಡದೇವರಮಠ ಸ್ಪರ್ಧೆ ವಿಚಾರಕ್ಕೆ ಮಾತನಾಡಿ, ಶಿಗ್ಗಾವಿ ಕ್ಷೇತ್ರಕ್ಕೆ ನನ್ನ ಹೆಸರು ಚರ್ಚೆಯಾಗುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ನಾನು ಶಿಗ್ಗಾವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಶಿಗ್ಗಾವಿಯಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಅರ್ಹ ಅಭ್ಯರ್ಥಿಗಳು ಶಿಗ್ಗಾವಿ ಭಾಗದಲ್ಲಿದ್ದಾರೆ. ಸೋತಾಗಲು ಸಹ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾವಿ ಲೀಡರ್ ಗಳು ಕಾಂಗ್ರೆಸ್ ಗೆ ಲೀಡ್ ತಂದುಕೊಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next