Advertisement
ನಗರದ ಗಾಂಧಿನಗರದಿಂದ ನವಲೂರು ಸೇತುವೆವರೆಗೂ ಚಕ್ಕಡಿ ಏರಿ ಪ್ರತಿಭಟನಾ ಮೆರವಣಿಗೆ ಕೈಗೊಂಡ ಸತೀಶ ಜಾರಕಿಹೊಳಿ ಜೊತೆ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಪಾಲ್ಗೊಂಡಿದ್ದರು.
ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಧನದ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಬೇಕು ಎಂದು ಸತೀಶ ಜಾರಕಿಹೊಳಿ ಒತ್ತಾಯಿಸಿದರು. ಬೆಳಗಾವಿ ಕಳೆದ ವರ್ಷದ ಪ್ರವಾಹಕ್ಕೆ ಸಾಕಷ್ಟು ನಲುಗಿದೆ. ಸರ್ಕಾರ ಕಣ್ತೆರೆದು ನೋಡಬೇಕು. ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಪರಿಹಾರ ಕೊಡುವ ಕೆಲಸವಾಗಬೇಕು ಎಂದು ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದರು.