Advertisement

ಸತಾರಾ ಭಜನ ಮಂಡಳಿಯವರಿಂದ ವಸಾಯಿರೋಡ್‌ನ‌ಲ್ಲಿ ಭಜನ ಕಾರ್ಯಕ್ರಮ

04:37 PM Jun 09, 2017 | Team Udayavani |

ಮುಂಬಯಿ: ಸತಾರಾ ಭಜನ ಮಂಡಳಿಯವರಿಂದ ಬಾಬರ ಭುವಾ ಅವರ ನೇತೃತ್ವತದಲ್ಲಿ ಭಜನ ಕಾರ್ಯಕ್ರಮವು ಜೂ. 4ರಂದು ಸಂಜೆ 5ರಿಂದ ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಮಂದಿರದಲ್ಲಿ ಜರಗಿತು.

Advertisement

ಸುಮಾರು ಎರಡೂವರೆ ಗಂಟೆಗಳ ಕಾಲ ವಾರ್ಕರಿ ಪದ್ಧತಿಯಲ್ಲಿ ಮರಾಠಿ ಭಜನೆಗಳನ್ನು ಹಾಡಿದರು. ಬಾಬರ ಭುವ 1980ರಿಂದ ಸುಮಾರು 20-25 ವರ್ಷಗಳಿಂದ ವಸಾಯಿ ನಿವಾಸಿಗಳಾಗಿದ್ದು, ವಸಾಯಿಯಲ್ಲಿ ಮತ್ತು ಮುಂಬಯಿಯಲ್ಲಿ ಭಜನ ಸೇವೆಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿ ಹೆಸರು ಮಾಡಿದ್ದಾರೆ. ಪ್ರಸ್ತುತ ಅವರ ಹುಟ್ಟೂರಾದ ಸತಾರದಲ್ಲಿ ವಾಸಿಸುತ್ತಿದ್ದು, ಉತ್ತಮ ಭಜನ ಮಂಡಳಿಯನ್ನು ಸ್ಥಾಪಿಸಿ ಅವರ ಗ್ರಾಮದೇವರಾದ ಹನುಮಾನ್‌ ಮಂದಿರದಲ್ಲಿ ಪ್ರತೀ ಶನಿವಾರ ಭಜನೆ ಮಾಡುತ್ತಾರೆ.

ಮಂಡಳಿಯ ಎಲ್ಲಾ ಸದಸ್ಯರನ್ನು ಶ್ರೀಫಲ ಮತ್ತು ವಸ್ತ್ರವನ್ನಿತ್ತು ರಾಮಕೃಷ್ಣ ಹೆಗ್ಡೆ ಮತ್ತು ಅಶೋಕ್‌ ಶಿಂಧೆ ಅವರು  ಗೌರವಿಸಿದರು. ಶ್ರೀ ಬಾಬರ ಭುವಾ ಅವರನ್ನು ಸಮಿತಿಯ ಸಂಚಾಲಕ ದೇವೇಂದ್ರ ಭಕ್ತರ ಹಸ್ತದಿಂದ ಸಮಿತಿಯ ಪರವಾಗಿ ಶಾಲು ಹೊದೆಸಿ, ಫಲಪುಷ್ಪ ಮತ್ತು ಬಾಲಾಜಿಯ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಈ ಮಂಡಳಿಯವರು ಬಾಲಾಜಿ ಮಂದಿರದಲ್ಲಿ ಜರಗುವ ಚಟುವಟಿಕೆಗಳ ಬಗ್ಗೆ ಪ್ರಶಂಸಿಸಿ ದರು. ಭಜನ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯದರ್ಶಿ ಪುರುಷೋ ತ್ತಮ ಶೆಣೈ, ಸಹ ಕಾರ್ಯದರ್ಶಿ ವಿವೇಕಾನಂದ ಭಕ್ತ, ಸತ್ಯೇಂದ್ರ ನಾಯಕ್‌, ಪ್ರಬಂಧಕ ಪ್ರಕಾಶ್‌ ಶೆಣೈ, ಉಪ ಕೋಶಾಧಿಕಾರಿ ವಿಶ್ವನಾಥ ಪೈ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next