Advertisement

ಸಾಸ್ತಾನ ‘ರುಚಿ’ಸಂಸ್ಥೆಯಲ್ಲಿ ಓವನ್ ಸ್ಪೋಟಗೊಂಡು ಮಾಲೀಕ ರೋಬರ್ಟ್ ಪುಟಾರ್ಡೊ ಸಾವು

12:40 PM Aug 10, 2020 | sudhir |

ಕೋಟ: ಸಾಸ್ತಾನ ಸಮೀಪ ಐರೋಡಿ ಅಲ್ಸೆಬೆಟ್ಟು ರಸ್ತೆಯಲ್ಲಿರುವ ಬೇಕರಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ‘ರುಚಿ’ಯಲ್ಲಿ ಓವನ್ ಸ್ಪೋಟಗೊಂಡು ಸಂಸ್ಥೆಯ ಮಾಲೀಕ, ಉಡುಪಿ ಜಿಲ್ಲಾ ಬೇಕರಿ ಹಾಗೂ ಖ್ಯಾದ ತಿನಿಸುಗಳ ತಯಾರಕರ ಸಂಘದ ಜಿಲ್ಲಾಧ್ಯಕ್ಷ ರೋಬರ್ಟ್ ಪುಟಾರ್ಡೊ ಸ್ಥಳದ್ಲಲೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

Advertisement

ಎಂದಿನಂತೆ ಬೆಳಗ್ಗೆ 8ಗಂಟೆಯ ಸುಮಾರಿಗೆ ಪ್ಯಾಕ್ಟರಿಯಲ್ಲಿ ಕೆಲಸ ಆರಂಭಗೊಂಡಿದ್ದು ಓವನ್ ಚಾಲನೆ ಮಾಡಲು ಪುಟಾರ್ಡೊ ಅವರು ಪ್ರಯತ್ನಿಸುತ್ತಿದ್ದಾಗ ಸಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭ ನಾಲ್ವರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಓರ್ವನಿಗೆ ಸಣ್ಣ ಗಾಯಗಳಾಗಿದೆ. ಸ್ಪೋಟದ ತೀವೃತೆಗೆ ತಲೆ ಛಿದ್ರಗೊಂಡಿದೆ. ಗ್ಯಾಸ್ ಲೀಕ್ ನಿಂದಾಗಿ  ದುರಂತ ಸಂಭವಿಸಿದೆ ಎನ್ನಲಾಗಿದೆ.  ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸುಮಾರು ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ರುಚಿ ಸಂಸ್ಥೆ ಉಡುಪಿ, ಮಂಗಳೂರು, ಉತ್ತರಕನ್ನಡದಲ್ಲಿ ಬಹಳಷ್ಟು ಹೆಸರುಗಳಿಸಿತ್ತು ಹಾಗೂ ನೂರಾರು ಮಂದಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿತ್ತು. ಸಂಸ್ಥೆಯ ಏಳಿಗೆಗೆ ಪುಟಾರ್ಡೊ ಅವರು ಸಾಕಷ್ಟು ಶ್ರಮಿಸಿದ್ದರು.

ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಕುಮಾರಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಆನಂತಪದ್ಮನಾಭ ಹಾಗೂ ಕೋಟ ಠಾಣೆಯ ಉಪನಿರೀಕ್ಷಕ ಸಂತೋಷ್ ಆಗಮಿಸಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ಅಗ್ನಿಶಾಮಕ ದಳ, ಮೆಸ್ಕಾಂ ಸಿಬಂದಿ, ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಸ್ಥಳೀಯರು ಸಹಕರಿಸಿದರು. ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಘಟನೆ ಕುರಿತು ಖೇದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next