ಬೆಳ್ತಂಗಡಿ: ಕರಾವಳಿಯಲ್ಲಿ ಸ್ಲೀಪರ್ ಸೆಲ್ ಗಳು ಸದ್ದಿಲ್ಲದೆ ಕಾರ್ಯಪ್ರಯತ್ನ ನಡೆಸುತ್ತಿದೆಯಾ ಎಂಬ ಅನುಮಾನಕ್ಕೆ ಮತ್ತಷ್ಟು ಸಾಕ್ಷೀಕರಿಸುವಂತೆ ಇದೀಗ ನಿಷೇಧಿತ ಸ್ಯಾಟಲೈಟ್ ಫೋನ್ಗಳು ಆಕ್ಟಿವ್ ಆಗಿರುವ ಕುರಿತು ರಾ ಏಜಿನ್ಸಿ ಸಿಗ್ನಲ್ ಪತ್ತೆಹಚ್ಚಿದೆ.
ಕಳೆದ ಮೂರು ದಿನಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು, 15 ದಿನಗಳ ಹಿಂದೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕಿಲ್ಲೂರು ಹಾಗೂ ಕಾರ್ಕಳದ ಬಜಗೋಳಿ ಭಾಗಗಳಲ್ಲಿ ಆಗಾಗ ಸಾಟಲೈಟ್ ಫೋನ್ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತವೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.
ಕೊರಿಯಾ ದೇಶದ ತುರಾಯಾ ಬ್ರಾಂಡ್‌ನ ಸೆಟೆಲೈಟ್ ಫೋನ್ ಆ್ಯಕ್ಟಿವ್ ಆಗಿದ್ದು, ಕಳೆದ 6 ದಿನಗಳಲ್ಲಿ 2 ಬಾರಿ ಸ್ಯಾಟಲೈಟ್ ಫೋನ್ ಸಂಪರ್ಕವನ್ನ ಸಾಧಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಗುಪ್ತಚರ ಹಾಗೂ ಆಂತರಿಕ ಭದ್ರತಾ ಇಲಾಖೆಯ ಅಧಿಕಾರಿಗಳು ತಮ್ಮ ತನಿಖೆಯನ್ನ ಮುಂದುವರಿಸಿವೆ.
2019 ರಲ್ಲಿ ಜೂನ್ ನಿಂದ ಆಗಸ್ಟ್ ಮಧ್ಯದಲ್ಲಿ ಬೆಳ್ತಂಗಡಿ ತಾಲೂಕಿನ ಗೋವಿಂದೂರಿನಲ್ಲಿ ಇಂತಹ ಘಟನೆ ನಡೆದಿತ್ತು. ಇಲ್ಲಿಗೆ ಅಧಿಕಾರಿಗಳು ಬಂದು ತನಿಖೆ ನಡೆಸಿ ಹೋಗಿದ್ದರು.
2008ರ ಮುಂಬೈ ದಾಳಿ ವೇಳೆ ಭಯೋತ್ಪಾದಕರು ‘ತುರಾಯಾ’ ಸ್ಯಾಟಲೈಟ್ ಫೋನ್ ಬಳಸಿದ್ದರು. ಈ ದಾಳಿ ನಂತರ ಭಾರತದಾದ್ಯಂತ ‘ತುರಾಯಾ’ ಸ್ಯಾಟಲೈಟ್ ಫೋನ್ ಗಳನ್ನು ನಿಷೇಧ ಮಾಡಲಾಗಿದೆ. ಇದೀಗ ಮಗದೊಮ್ಮೆ ಸ್ಯಾಟಲೈಟ್ ಫೋನ್ ಗಳು ಚಾಲೂ ಆಗಿರುವ ಕುರಿತು ಆಂತರಿಕ ಭದ್ರತಾ ದಳ ತನಿಖೆ ಮುಂದುವರೆಸಿರುವ ಕುರಿತು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ.