Advertisement
ಪ್ರತಿದಿನ ಬೆಳಗ್ಗೆ 11ರ ತನಕ ಟೋಲ್‌ನಲ್ಲಿ ವಾಹನದಟ್ಟನೆ ಹೆಚ್ಚುತ್ತಿದ್ದು, ಟೋಲ್‌ಗೇಟ್ ದಾಟಲು ಸಾಕಷ್ಟು ಕಾಯಬೇಕಾಗಿದೆ. ಈ ಹಿಂದೆ ಎರಡು ಗೇಟ್‌ಗಳಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಮಾಡುವಂತೆ ಪೊಲೀಸರು ಸೂಚನೆ ನೀಡಿದರೂ ಕೂಡ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.ಸ್ವಯಂಚಾಲಿತ ಫಾಸ್ಟ್ಯಾಗ್ ರೀಡಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಬೇಕಾಗಿದೆ. ಒಂದೇ ಸ್ಕ್ಯಾನರ್ ಯಂತ್ರ ಇರುವುದರಿಂದ ಸಮಸ್ಯೆಯಾಗಿದೆ ಎನ್ನಲಾಗಿದೆ. ಆದರೆ ಹೆಚ್ಚುವರಿ ಯಂತ್ರದ ವ್ಯವಸ್ಥೆ ಮಾಡಿ ಎರಡು ಗೇಟ್‌ಗಳನ್ನು ತೆರೆಯಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.
ದ್ವಿಚಕ್ರ ವಾಹನಗಳು ಕೂಡ ಸಾಮಾನ್ಯ ಗೇಟ್‌ನಲ್ಲೇ ಸಂಚರಿಸಬೇಕಾಗಿರುವುದ ರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್ ಬೇಕು ಎಂಬ ಆಗ್ರಹವಿದೆ.