ಆ್ಯಂಬುಲೆನ್ಸ್ ಒಂದು ತಿಂಗಳಿನಿಂದ ದುರಸ್ತಿ ಯಲ್ಲಿದ್ದು ಇದುವರೆಗೂ ಸೇವೆಗೆ ಮರಳಿಲ್ಲ ಹಾಗೂ ಬದಲಿ ವಾಹನದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಕುಂದಾಪುರದಿಂದ-ಉದ್ಯಾವರದ ವರೆಗಿನ 40 ಕಿ.ಮೀ. ವ್ಯಾಪ್ತಿಯನ್ನು ಸಾಸ್ತಾನ ಟೋಲ್ ಹೊಂದಿದ್ದು, ಈ ಪ್ರದೇಶದಲ್ಲಿ ಯಾವುದೇ ಅಪಘಾತವಾದರೆ ಇವರು ತುರ್ತಾಗಿ ನೆರವಿಗೆ ಧಾವಿಸಬೇಕು. ಪ್ರಸ್ತುತ ಇವರಿಂದ ಈ ಪ್ರದೇಶಕ್ಕೆ ತುರ್ತು ಸೇವೆ ಲಭ್ಯವಾಗುವುದಿಲ್ಲ.
Advertisement
ಅಪಘಾತವಾದರೆ ಸಮಸ್ಯೆಹೆದ್ದಾರಿಯಲ್ಲಿ ಅಪಘಾತವಾದಾಗ ಟೋಲ್‌ನ ಆ್ಯಂಬುಲೆನ್ಸ್ ಅಥವಾ ಸರಕಾರಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗುತ್ತದೆ. ಇದೀಗ 108 ವಾಹನವನ್ನು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಬಳಸುವುದರಿಂದ ಇತರ ಸೇವೆಗೆ ಇವರು ಬರುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲು ಖಾಸಗಿ ವಾಹನ ಅವಲಂಬಿಸಬೇಕಿದೆ. ಇತ್ತೀಚೆಗೆ ಕೆಲವು ಕಡೆ ಅಪಘಾತವಾದಾಗ ಖಾಸಗಿ ಆ್ಯಂಬುಲೆನ್ಸ್ ಸಿಗದೆ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲು ಸಾಕಷ್ಟು ಸಮಸ್ಯೆಯಾಗಿತ್ತು. ಗಾಯಾಳು ವಿನ ಸ್ಥಿತಿ ಗಂಭೀರವಾಗಿದ್ದಾಗಲೂ ಇದಕ್ಕೆ ಬದಲಿ ವ್ಯವಸ್ಥೆ ಮಾಡಿರಲಿಲ್ಲ.
ಚಿಕ್ಕ ಅಪಘಾತದಿಂದ ಆ್ಯಂಬುಲೆನ್ಸ್ ಹಾಳಾಗಿದ್ದು ಇದೀಗ ದುರಸ್ತಿ ನಡೆಯುತ್ತಿದೆ. ಬದಲಿ ವ್ಯವಸ್ಥೆಯ ಕುರಿತು ಕಂಪೆನಿ ಯಾವುದೇ ಸೂಚನೆ ನೀಡಿಲ್ಲ. ಈಗಿರುವ ಆ್ಯಂಬುಲೆನ್ಸ್ ಶೀಘ್ರ ದುರಸ್ತಿಗೊಂಡು ಸೇವೆಗೆ ಲಭ್ಯವಾಗಲಿದೆ.
-ಬಶೀರ್, ಟೋಲ್ ಮ್ಯಾನೇಜರ್
Related Articles
ಆ್ಯಂಬುಲೆನ್ಸ್ ಹಾಳಾಗಿ ಒಂದು ತಿಂಗಳು ಕಳೆದರೂ ಬದಲಿ ವ್ಯವಸ್ಥೆ ಯಾಗದೆ ಹೆದ್ದಾರಿ ಬಳಕೆದಾರರಿಗೆ ಸಮಸ್ಯೆಯಾಗಿದೆ. ಇದಕ್ಕೆ ಆದಷ್ಟು ಶೀಘ್ರ
ಬದಲಿ ವ್ಯವಸ್ಥೆ ಯಾಗಬೇಕು ಇಲ್ಲವೇ ಸುಸ್ಥಿತಿಯಲ್ಲಿರುವ ಆ್ಯಂಬುಲೆನ್ಸ್‌ವೊಂದನ್ನು ಇಲ್ಲಿಗೆ ಶೀಘ್ರ ನಿಯೋಜಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
-ಅಲ್ವಿನ್ ಅಂದ್ರಾದೆ, ಕಾರ್ಯದಶಿ, ಹೆದ್ದಾರಿ ಜಾಗೃತಿ ಸಮಿತಿ
Advertisement