Advertisement

ಕೋರ್ಟ್ ಗೆ ಶರಣು; ಶಶಿಕಲಾ, ಇಳವರಸಿ ಪರಪ್ಪನ ಅಗ್ರಹಾರದ ಜೈಲುಪಾಲು

05:25 PM Feb 15, 2017 | Team Udayavani |

ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಬುಧವಾರ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರ ಆವರಣದಲ್ಲಿರುವ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಅಶ್ವಥ್ ನಾರಾಯಣ್ ಅವರ ಮುಂದೆ ವಿಕೆ ಶಶಿಕಲಾ ನಟರಾಜನ್, ಶಶಿಕಲಾ ಅಣ್ಣನ ಪತ್ನಿ ಇ.ಇಳವರಸಿ ಶರಣಾಗಿದ್ದಾರೆ. ಕೋರ್ಟ್ ನಿಯಮಗಳು ಮುಗಿದಿದ್ದು, ಶಶಿಕಲಾ ಹಾಗೂ ಇಳವರಸಿಯನ್ನು ಕೇಂದ್ರ ಕಾರಾಗೃಹಕ್ಕೆ ಜೈಲಿಗೆ ಕಳುಹಿಸಲಾಗಿದೆ.

Advertisement

ಬೆಳಗ್ಗೆ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ನಮಸ್ಕರಿಸಿ ಜಯಾ ಅವರು ಬಳಸುತ್ತಿದ್ದ ಕಾರಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಯಾ ಸಮಾಧಿ ಮೇಲೆ ಶಪಥಗೈದಿರುವ ವಿಡಿಯೋ ತಮಿಳುನಾಡಿನಲ್ಲಿ ವೈರಲ್ ಆಗಿದೆ. ಪರಪ್ಪನ ಅಗ್ರಹಾರದ ಆವರಣದಲ್ಲಿರುವ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಶಶಿಕಲಾ, ಇಳವರಸಿ ಶರಣಾಗಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶಶಿಕಲಾ ಸೇರಿದಂತೆ ಮೂವರಿಗೂ 4 ವರ್ಷ ಜೈಲುಶಿಕ್ಷೆ ಹಾಗೂ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿತ್ತು.  ಬೆಂಗಳೂರು ಕೋರ್ಟ್ ಗೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ವಿಕೆ ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಇಂದೇ ಕೋರ್ಟ್ ಗೆ ಶರಣಾಗುವಂತೆ ಸೂಚಿಸಿತ್ತು.

ಪರಪ್ಪನ ಅಗ್ರಹಾರದ ಬಳಿ ದಾಂಧಲೆ;

ಪರಪ್ಪನ ಅಗ್ರಹಾರದ ಬಳಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಶಶಿಕಲಾ ಬೆಂಬಲಿಗರಿಗೆ ಸೇರಿದ  5 ಸ್ಕಾರ್ಪಿಯೋ, 1 ಇನ್ನೋವಾ ಕಾರುಗಳ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ. ಜಯಲಲಿತಾ ಅವರ ಅಭಿಮಾನಿಗಳು ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಗುಂಪನ್ನು ಚದುರಿಸಲು ಪೊಲೀಸ್ ಲಾಠಿಪ್ರಹಾರ ನಡೆಸಿದ್ದಾರೆ.

Advertisement

ಜಯಾಗೆ ಶಶಿಕಲಾಳಿಂದ ಮೋಸ ಮಾಡಿದ್ದಾಳೆ ಎಂದು ಆರೋಪಿಸಿರುವ ಅಭಿಮಾನಿಗಳು ಕಾರುಗಳ ಮೇಲೆ ಕಲ್ಲುತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 420 ಶಶಿಕಲಾ ಎಂದು ಜಯಾ ಬೆಂಬಲಿಗರು ಘೋಷಣೆ ಕೂಗಿದರು.

ಮನೆ ಊಟಕ್ಕೆ ಅವಕಾಶ ಕಲ್ಪಿಸಲು ಜಡ್ಜ್ ನಕಾರ:
ನನಗೆ ಶುಗರ್ ಇದೆ, ಹಾಗಾಗಿ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಶಶಿಕಲಾ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಮನೆ ಊಟಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜಡ್ಜ್ ಮುಂದೆ ವಿಎನ್ ಸುಧಾಕರನ್ ಶರಣು:

ಶಶಿಕಲಾ, ಇಳವರಸಿ ಬಳಿಕ ವಿಎನ್ ಸುಧಾಕರನ್ ವಿಶೇಷ ಕೋರ್ಟ್ ನ್ಯಾ.ಅಶ್ವತ್ಥ್ ನಾರಾಯಣ್ ಮುಂದೆ ಶರಣಾಗಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ಜೈಲಿಗೆ ಕಳುಹಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next