Advertisement

ಶಶಿಕಲಾ ನಟರಾಜನ್‌ ಸಂಬಂಧಿ ಇಳವರಸಿಗೂ ಕೋವಿಡ್

12:09 PM Jan 24, 2021 | Team Udayavani |

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ಶಶಿಕಲಾ ನಟರಾಜನ್‌ ಅವರ ಸಂಬಂಧಿ ಇಳವರಸಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಕಳೆದ ಎರಡು ದಿನಗಳ ಹಿಂದೆ ಶಶಿಕಲಾ ಅವರಿಗೆ ಸೋಂಕು ದೃಢಪಟ್ಟು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಳವರಿಸಿ ಕೂಡಾ ಶಶಿಕಲಾ ಅವರೊಟ್ಟಿಗೆ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅವರಿಗೂ ಕೋವಿಡ್ ಪರೀಕ್ಷೆ  ನಡೆಸಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನೂ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮಧ್ಯೆ, ಶಶಿಕಲಾ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದ್ದು, ಶ್ವಾಸಕೋಶದಲ್ಲಿ ಸೋಂಕು ಹೆಚ್ಚಿದ್ದರಿಂದ ತುರ್ತು ನಿಗಾ ಘಟಕದಲ್ಲೇ (ಐಸಿಯು) ಚಿಕಿತ್ಸೆ ನೀಡಲಾ ಗುತ್ತಿದೆ. ಹತ್ತು ದಿನಗಳ ನಂತರ ಮತ್ತೂಮ್ಮೆ ಪರೀಕ್ಷೆ ನಡೆಸಲಾ ಗುವುದು. ಇಳವರಸಿಗೆ
ಸೋಂಕು ಲಕ್ಷಣಗಳಿಲ್ಲದ ಹಿನ್ನೆಲೆ ವಾರ್ಡ್‌ನಲ್ಲಿ ನಿಗಾದಲ್ಲಿರಿಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಅಧೀಕ್ಷಕ ಡಾ. ರಮೇಶ್‌ ಕೃಷ್ಣನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next