Advertisement

ಸಸಿಹಿತ್ಲು : ಬೀಚ್‌ ರಸ್ತೆ ಸಂಚಾರಕ್ಕೆ ಮುಕ್ತ

10:51 AM Jun 09, 2018 | |

ಸಸಿಹಿತ್ಲು : ಇಲ್ಲಿನ ಬೀಚ್‌ನಿಂದ ಮಸೀದಿಯವರೆಗೆ ನಿರ್ಮಾಣವಾಗುತ್ತಿರುವ ಎನ್‌ಸಿಆರ್‌ಎಂಪಿ ಯೋಜನೆಯ 4.5 ಕೋ. ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆಯನ್ನು ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದಿಂದ ಮುಂಡ ಬೀಚ್‌ನ ವರೆಗೆ ಶುಕ್ರವಾರದಿಂದ ಒಂದು ಬದಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

Advertisement

ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಕಾಮಗಾರಿಯ ಆಮೆಗತಿಯ ಬಗ್ಗೆ ಸ್ಥಳೀಯವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತಲ್ಲದೆ, ಬೀಚ್‌ಗೆ ತೆರಳುವ ಪ್ರವಾಸಿಗರಿಗೂ ಹಾಗೂ ಮುಂಡ ಬೀಚ್‌ ಪ್ರದೇಶದ ನಿವಾಸಿಗಳು ಸುಮಾರು 2 ಕಿ.ಮೀ. ದೂರವನ್ನು ನಡೆದುಕೊಂಡೇ ಸಂಚರಿಸಬೇಕಾಗಿತ್ತು.

ಕಾಂಕ್ರೀಟ್‌ಗೊಳ್ಳುತ್ತಿರುವ ರಸ್ತೆಯನ್ನು ವೀಕ್ಷಿಸಲು ಜೂ. 5 ರಂದು ದೆಹಲಿಯ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳ ತಂಡವು, ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಆದಷ್ಟು ಶೀಘ್ರವಾಗಿ ಕಾಮಗಾರಿ ನಡೆಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸೂಚನೆ ನೀಡಿದ್ದರಿಂದ ಇದೀಗ ಭಗವತೀ ದೇವಸ್ಥಾನದ ದ್ವಾರದಿಂದ ರಿಕ್ಷಾ, ಕಾರು, ಬೈಕ್‌ಗಳ ಸಹಿತ ಲಘು ವಾಹನಗಳು ಸಂಚರಿಸುತ್ತಿದೆ. ಒಂದೆರಡು ದಿನದಲ್ಲಿ ಸಂಪೂರ್ಣವಾಗಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿ ಬಸ್ಸು,ಲಾರಿಗಳು ಸಹ ಸಂಚರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next