Advertisement

ಸಸಿಹಿತ್ಲು ಬೀಚ್‌ನ ದುಸ್ಥಿತಿಗೆ ರಾಜ್ಯ ಸರಕಾರವೇ ಹೊಣೆ : ಅಭಯಚಂದ್ರ ಜೈನ್

07:19 PM May 15, 2021 | Team Udayavani |

ಸಸಿಹಿತ್ಲು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ವಿವಿಧ ಇಲಾಖೆಗಳ ಮೂಲಕ ಸುಮಾರು 7 ಕೋ.ರೂ. ವೆಚ್ಚದಲ್ಲಿ ಸಸಿಹಿತ್ಲುವಿನ ಮುಂಡ ಬೀಚ್‌ನ್ನು ರೂಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಗೆ ಬಂದಿತ್ತು. ಇಂತಹ ಸುಂದರ ತಾಣವನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ರಾಜ್ಯ ಸರಕಾರ ವಿಫಲವಾಗಿದ್ದರಿಂದಲೇ ಇಂದು ಬೀಚ್ ಕಡಲಿಗೆ ಸೇರಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

Advertisement

ಸಸಿಹಿತ್ಲುವಿನ ಮುಂಡ ಬೀಚ್‌ಗೆ ಶನಿವಾರ ಸಂಜೆ ಭೇಟಿ ನೀಡಿದ ಅವರು ಸ್ಥಳದಿಂದ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕು, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ :ಗಂಗಾವತಿ : ಸ್ವಯಂಪ್ರೇರಿತ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ವಾರ್ಡ್ ನಿವಾಸಿಗಳು

ಕೆಪಿಸಿಸಿ ವಕ್ತಾರ ಎಚ್.ವಸಂತ ಬೆರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಹಳೆಯಂಗಡಿ ಪಂ. ಸದಸ್ಯರಾದ ಧನಜ್‌ರಾಜ್ ಕೋಟ್ಯಾನ್, ಚಂದ್ರಕುಮಾರ್, ಅನಿಲ್ ಪೂಜಾರಿ, ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next