Advertisement

ಸರ್ವೋದಯ ದಿನಾಚರಣೆ: ರಾಷ್ಟ್ರಪಿತನ ಸ್ಮರಣೆ

09:20 AM Jan 31, 2019 | |

ಮೈಸೂರು: ಅರಮನೆ ನಗರಿ ಮೈಸೂರಿನ ವಿವಿಧೆಡೆ ಸರ್ವೋದಯ ದಿನ ಆಚರಿಸುವ ಮೂಲಕ ರಾಷ್ಟ್ರಪಿತನಿಗೆ ಗೌರವ ನಮನ ಸಲ್ಲಿಸಲಾಯಿತು.

Advertisement

ಜಿಲ್ಲಾಡಳಿತದ ವತಿಯಿಂದ ಮೈಸೂರು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಪೂರ್ಣಿಮಾ, ಉಪ ವಿಭಾಗಾಧಿ ಕಾರಿ ಶಿವೇಗೌಡ ಪುಷ್ಪ ನಮನ ಸಲ್ಲಿಸಿದರು.

ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 71ನೇ ಸರ್ವೋದಯ ದಿನಾಚರಣೆಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಗಾಂಧೀಜಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ, ಕುಲಸಚಿವ ಪ್ರೊ.ಆರ್‌.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜಿ.ಸೋಮಶೇಖರ್‌, ಗಾಂಧಿಭವನ ನಿರ್ದೇಶಕ ಪ್ರೊ.ಎಂ.ಎಸ್‌.ಶೇಖರ್‌, ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎನ್‌.ನಾಗರಾಜ ಮೊದಲಾದವರು ಹಾಜರಿದ್ದರು. ಇದೇ ವೇಳೆ ಮೈಸೂರು ಮಹಾ ನಗರಪಾಲಿಕೆಯ ಪೌರ ಕಾರ್ಮಿಕ ಮಹಿಳೆ ಗುರುವಮ್ಮ ಅವನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ.ಹೇಮಂತ್‌ಕುಮಾರ್‌, ಮಹಾತ್ಮ ಗಾಂಧೀಜಿಯವರ ಹೋರಾಟ ಮತ್ತು ತ್ಯಾಗದ ಫ‌ಲವಾಗಿ ನಾವಿಂದು ದೇಶದಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರ ಅಗತ್ಯವನ್ನೂ ಪೂರೈಸುವ ವಸ್ತುಗಳಿವೆ, ಆದರೆ ಮನುಷ್ಯನ ದುರಾಸೆಯನ್ನು ಪೂರೈಸುವ ಯಾವುದೇ ವಸ್ತುಗಳಿಲ್ಲ ಎಂದು ಮಹಾತ್ಮ ಗಾಂಧೀಜಿಯವರು ಪದೇ ಪದೆ ಹೇಳುತ್ತಿದ್ದರು. ಈಗಲಾದರೂ ಮಾನವನ ದುರಾಸೆಗೆ ಕಡಿವಾಣ ಬೀಳಬೇಕಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಮಾತನಾಡಿ, ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಾಗ ಭಾರತ ಸಂಪದ್ಭರಿತವಾಗಿತ್ತು. ಆದರೆ, ಈಗ ದೇಶದ ಪರಿಸ್ಥಿತಿ ಏನಾಗಿದೆ ಎಂಬುದನ್ನು ಎಲ್ಲರೂ ಚಿಂತಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸುಬ್ಬರಾಯನ ಕೆರೆ: ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಸುಬ್ಬರಾ ಯನ ಕೆರೆಯಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ಗಾಂಧೀಜಿ ಪುತ್ಥಳಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಎಂ.ಜಿ.ಕೃಷ್ಣಮೂರ್ತಿ, ಪ್ರೊ.ಎಚ್.ಎನ್‌.ಅಶ್ವಥನಾರಾಯಣ, ವೈ.ಸಿ.ರೇವಣ್ಣ ಮೊದಲಾದವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಗಡಿಯಾರ ಗೋಪುರ: ಮೈಸೂರು ವಿವಿಯ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ಗಡಿಯಾರ ಗೋಪುರದ ಬಳಿ 71ನೇ ಸವೋರ್ದಯ ದಿನಾಚರಣೆ ಆಚರಿಸಲಾಯಿತು. ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್‌.ಶಿವರಾಜಪ್ಪ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಆರ್‌.ಶಿವಪ್ಪ, ಚಂದ್ರಮೌಳಿ ಮೊದಲಾದವರು ಉಪಸ್ಥಿತರಿದ್ದರು.

ನಟರಾಜ ಕಾಲೇಜು: ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸರ್ವೋದಯ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸ ಲಾಯಿತು. ಪ್ರಾಂಶುಪಾಲರಾದ ರಾಣಿ, ಉಪ ಪ್ರಾಂಶುಪಾಲ ಪ್ರದೀಪ್‌,ಎನ್‌ಎಸ್‌ಎಸ್‌ ಕಾರ್ಯ ಕ್ರಮ ಅಧಿಕಾರಿ ವಿ.ಡಿ.ಸುನೀತಾರಾಣಿ ಮೊದಲಾ ದವರು ಉಪಸ್ಥಿತರಿದ್ದರು.

ಕುವೆಂಪು ನಗರ: ಕುವೆಂಪು ನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಎನ್ನೆಸ್ಸೆಸ್‌ ಮತ್ತು ಇತಿಹಾಸ ಅಧ್ಯಯನ ವಿಭಾಗದಿಂದ 71ನೇ ಸರ್ವೋದಯ ದಿನ ಆಚರಿಸಲಾಯಿತು. ಪ್ರಾಂಶು ಪಾಲ ಡಾ. ಎಂ. ಮಹದೇವಯ್ಯ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next