Advertisement
ಕಾಮತ್ ಸಾವ್ಕಾರ್ ಶ್ರೀಮಂತ ಉದ್ಯಮಿ ಮಧ್ಯ ವಯಸ್ಸು ದಾಟಿ ವೃದ್ಧಾಪ್ಯ ಸಮೀಪಿಸುತ್ತಿರುವಾಗಲೇ ಎಲ್ಲ ಆಸ್ತಿ – ಸೊತ್ತಗಳನ್ನು ಇಬ್ಬರು ಗಂಡು ಮಕ್ಕಳಿಗೆ ಸೊಸೆಯಂದಿರಿಗೆ , ಮಗಳಿಗೆ, ತಂಗಿಗೆ, ಕೆಲಸದ ನೌಕರರಿಗೆ ಹಂಚಿ ತೀರ್ಥಯಾತ್ರೆಗೆ ಹೊರಡುತ್ತಾನೆ. ವಹಿವಾಟನ್ನು ಇಬ್ಬರು ತಾಯಿಯಿಲ್ಲದ ಪುತ್ರರಿಗೆ ವಹಿಸಿಕೊಟ್ಟು ನಿರ್ಗಮಿಸುತ್ತಾನೆ. ಆ ಸನ್ನಿವೇಷದಲ್ಲಿ ಮಾತೃದೇವೋಭವ ಪಿತೃದೇವೋಭವ ಎಂದು ಗುಣಗಾನ ಮಾಡುವ ಇಬ್ಬರು ಮಕ್ಕಳ ಮನಸ್ಸು ಅವರ ಜೀವನ ಸಂಗಾತಿಗಳ ಪ್ರಭಾವದಿಂದ ಪಲ್ಲಟವಾಗುತ್ತದೆ. ಹಿರಿಯ ಮಗ (ಶ್ರೀಧರ್)ನ ಮಾವನ (ಬಾಳಿY) ಶರೋನಿ ಪ್ರವೃತ್ತಿಯೂ ಕೂಡ ಮನೆಯ ಅಶಾಂತಿಗೆ ಕಾರಣವಾಗುತ್ತದೆ. ಪ್ರಾಮಾಣಿಕವಾಗಿ ದುಡಿದ ಕೆಲಸದಾಳು ಹರಿ ಮನೆಯಿಂದ ಹೊರ ಬೀಳಬೇಕಾಗುತ್ತದೆ. ಇಬ್ಬರೂ ಸೊಸೆಯಂದಿರು (ಲತಾ – ನಂದನ್) ಮನೆತನದ ಗೌರವ ಹಾಗೂ ಭವಿಷ್ಯವನ್ನು ಅಲಕ್ಷಿಸಿ ಸೊತ್ತಿಗಾಗಿ ಹಾತೊರೆಯುತ್ತಾರೆ. ಪ್ರೀತಿ – ವಿಶ್ವಾಸವಿದ್ದ ಮನೆಯಲ್ಲಿ ಒಡಕು ಬಂದು ಅಣ್ಣ – ತಮ್ಮಂದಿರು ಒಂದೇ ಮನೆಯಲ್ಲಿ ಎರಡು ಬಿಡಾರಗಳನ್ನು ಹೂಡಿದ ವಿಷಯವು ತೀರ್ಥಾಟನೆಯಿಂದ ಮರಳಿದ ಸಾವ್ಕಾರನಿಗೆ ಯಾತನೆ ಒದಗಿಸಿತು. ಎಷ್ಟೇ ಪ್ರಯತ್ನಪಟ್ಟರೂ ಅಣ್ಣ ತಮ್ಮಂದಿರನ್ನು ಸೊಸೆಯಂದಿರನ್ನು ಒಟ್ಟುಪಡಿಸಲಸಾಧ್ಯವಾಗಿ ಮನೆಬಿಟ್ಟು ಹೋದರು.
Advertisement
ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ
10:30 AM Mar 20, 2020 | mahesh |
Advertisement
Udayavani is now on Telegram. Click here to join our channel and stay updated with the latest news.