Advertisement
ಪಟ್ಟಣದ ಓಂ ಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ವೇದ, ಉಪನಿಷತ್ತು, ಗೀತೆ, ವಚನಗಳಿಗೆ ಐರೋಪ್ಯ ರಾಷ್ಟ್ರಗಳ ತತ್ವಜ್ಞಾನಿಗಳು ಮರುಳಾಗಿ, ಅವುಗಳ ಜಾಡಿನಲ್ಲಿ, ಗ್ರೀಕ್‌ನ ಪೈಥಾಗೋರಸ್, ಸಾಕ್ರೆಟಿಸ್, ಪ್ಲೇಟೋ ಮುಂತಾದ ದಾರ್ಶನಿಕ ಚಿಂತಕರು, ಭಾರತೀಯ ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ಮೆಚ್ಚಿಕೊಂಡಿದ್ದಾರೆ. ನಮ್ಮ ಅತ್ಯಂತ ಪ್ರಾಚೀನವಾದ ಭಾರತೀಯ ಸಂಸೃ್ಕತಿಯ ತತ್ವಗಳನ್ನು ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕಿದೆ. ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಬದುಕಿ, ಪರೀಕ್ಷೆಗಾಗಿಯೇ ಸಾಯುತ್ತಾರೆ. ಶಿಕ್ಷಕ ಕುದುರೆ ತರಬೇತು ದಾರನಲ್ಲ. ಕುದುರೆ ತರಬೇತುದಾರನಂತೆ ಕೆಲಸ ಮಾಡಿದರೆ ಆತ ಶಿಕ್ಷಕನಾಗುವುದಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರಾಗಿರಬೇಕು. ದುರಹಂಕಾರದ, ಅರ್ಥಹೀನ ಮಾತುಗಳನ್ನು ಶಿಕ್ಷಕರು ಬಿಡದಿದ್ದರೆ ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ ಬೆಳೆಸಲು ಸಾಧ್ಯವಾಗುವುದಿಲ್ಲ ಎಂದರು.
Advertisement
ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಪಾಲಿಸಿ
11:43 AM Sep 06, 2019 | Suhan S |
Advertisement
Udayavani is now on Telegram. Click here to join our channel and stay updated with the latest news.