Advertisement

ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಪತ್ನಿ ಸರ್ವಮಂಗಳ ಪಟೇಲ್ ನಿಧನ

09:53 AM Nov 10, 2019 | sudhir |

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್ ಪಟೇಲ್ ಅವರ ಪತ್ನಿ ಸರ್ವಮಂಗಳಮ್ಮ ಪಟೇಲ್ (84) ವಯೋಸಹಜ ಕಾಯಿಲೆಯಿಂದ ಶನಿವಾರ ನಿಧನರಾದರು.

Advertisement

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ ಬೆಂಗಳೂರಿನಲ್ಲಿರುವ “ಪುಣ್ಯ” ನಿವಾಸದಲ್ಲಿ ನಿಧನಹೊಂದಿದರು.

ತ್ರಿಶೂಲ ಪಾಣಿ ಪಟೇಲ್,ಸತಿಶ್ ಪಟೇಲ್ ಮತ್ತು ಮಹಿಮಾ ಪಟೇಲ್ – ಮೂವರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಜೆ.ಹೆಚ್.ಪಟೇಲ್ ಅವರ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಅವರು ಕಷ್ಟದ ದಿನಗಳಲ್ಲಿಯೂ ಸಹಾಯಕರಾಗಿ ಹೆಗಲು ನೀಡಿದ್ದರು.ಅಸಿಸ್ಟಂಟ್ ಕಮಿಷನರ್ ಅವರ ಮಗಳಾಗಿದ್ದರೂ ಎಲ್ಲಿಯೂ ಅಹಂಕಾರ ಸ್ವಭಾವ ತೋರಿದವರಲ್ಲ.ಮನೆಗೆ ಬಂದ ಎಲ್ಲರನ್ನೂ ಗೌರವ ಹಾಗೂ ಉದಾರದಿಂದ ನಡೆಸಿ ಕೊಳ್ಳುತ್ತಿದ್ದರು.

ಮುಖ್ಯಮಂತ್ರಿ ಸಂತಾಪ :
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಪತ್ನಿ ಶ್ರೀಮತಿ ಸರ್ವಮಂಗಳ ಪಟೇಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ ಯಾಗಿದ್ದ ಸರ್ವಮಂಗಳ ಪಟೇಲ್ ಅವರು ಜೆ.ಎಚ್. ಪಟೇಲರ ಬದುಕಿನ ಎಲ್ಲ ಮಜಲುಗಳಲ್ಲಿ ಬೆಂಬಲವಾಗಿ ನಿಂತವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿ ಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ನಾಳೆ ಸ್ವಗ್ರಾಮ ದಾವಣಗೆರೆ ತಾಲೂಕಿನ ಕಾರಿಗನೂರಿಗೆ ದಿವಂಗತ ಜೆ.ಎಚ್. ಅವರ ಸಮಾಧಿ ಪಕ್ಕದಲ್ಲೇ ಸರ್ವಮಂಗಳಮ್ಮ ಅಂತ್ಯಸಂಸ್ಕಾರ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next