Advertisement

ರಾಜಸ್ಥಾನದ ಸಾರಿಸ್ಕಾ ಹುಲಿ ರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚು

12:13 AM Mar 30, 2022 | Team Udayavani |

ಜೈಪುರ: ರಾಜಸ್ಥಾನದ ಸಾರಿಸ್ಕಾ ಹುಲಿ ರಕ್ಷಿತಾ ರಣ್ಯದಲ್ಲಿ ಭಾರಿ ಪ್ರಮಾಣದ ಕಾಳ್ಗಿಚ್ಚು ಎದ್ದಿದೆ. ಸೋಮವಾರ ಕಾಣಿಸಿಕೊಂಡ ಬೆಂಕಿ ಮಂಗಳ ವಾರದ ವೇಳೆಗೆ 10 ಚ.ಕಿ.ಮೀ.ಗೆ ವ್ಯಾಪಿಸಿದೆ.

Advertisement

ವಾಯುಪಡೆಯು 2 ಹೆಲಿಕಾಪ್ಟರ್‌ಗಳು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿವೆ. ಸಾರಿಸ್ಕಾ ರಕ್ಷಿತಾರಣ್ಯದಲ್ಲಿ ಸುಮಾರು 20 ಹುಲಿ ಗಳಿದ್ದು, ಅವುಗಳು ಉಸಿರುಗಟ್ಟಿ ಸಾಯುವ ಭೀತಿ ಎದುರಾಗಿದೆಯೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರಿಸ್ಕಾದ ಅರವಳ್ಳಿ ವ್ಯಾಪ್ತಿಯ ಕಣಿವೆಗಳು ಒಣ ಪ್ರದೇಶಗಳಾಗಿದ್ದು, ಚಿರತೆ, ಕಾಡು ನಾಯಿ, ನರಿ, ಕತ್ತೆ ಕಿರುಬಗಳು ಹಾಗೂ ಕಾಡು ಬೆಕ್ಕುಗಳ ಆವಾಸಸ್ಥಾನವೂ ಆಗಿವೆ. 43 ಕಿ.ಮೀ. ದೂರದಲ್ಲಿರುವ ಸಿಲಿಸೇರ್‌ ಸರೋವರ ದಿಂದ ನೀರು ತಂದು ಹೆಲಿಕಾಪ್ಟರ್‌ಗಳ ಮೂಲಕ ಸುರಿಯಲಾಗುತ್ತಿದೆ. ಅರಣ್ಯದ ಸುತ್ತಮುತ್ತಲಿ ರುವ 6 ಗ್ರಾಮಗಳಿಗೆ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ:ದಾದಿಯ ನಿರ್ಲಕ್ಷ್ಯದಿಂದ ಮಗು ಸಾವು : ನರ್ಸ್ ಗೆ ತಕ್ಕ ಶಿಕ್ಷೆ ವಿಧಿಸುವಂತೆ ಹೆತ್ತವರ ಆಗ್ರಹ

ಬೆಂಕಿಗೆ ಕಾರಣವೇನು? ಇತ್ತೀಚೆಗೆ ದೇಶದ ಉತ್ತರ ಭಾಗದಲ್ಲಿ ಬಿಸಿ ಗಾಳಿಯ ಪ್ರಮಾಣ ಏರಿಕೆಯಾಗಿದ್ದು, ಅದರಿಂದಾಗಿಯೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸ ಲಾಗಿದೆ. ಆರಂಭದಲ್ಲಿ ರಕ್ಷಿತಾರಣ್ಯದ ಬರೇಥಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈಗ ಅದು ರೋಡೆRಲಾ, ನಾರಂಡಿ, ಕಲಕಾಡಿ, ಕಟಿಘಾಟಿ ಹಾಗೂ ನಹರ್ಸಾತಿ ಪ್ರದೇಶಗಳಿಗೆ ಹಬ್ಬಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next