ನಮ್ಮಿಬ್ಬರ ಪ್ರೇಮಯಾನ ಆರಂಭವಾಗಿ ವರ್ಷಗಳುರುಳಿದವು. ಹೇಗೆ ಸಮಯ ಕಳೆಯಿತೆಂದೇ ತಿಳಿಯಲಿಲ್ಲ. ಈ ನಡುವೆ ಜಗಳಗಳು, ಪ್ರೀತಿ ಮುದ್ದಾಟಗಳು ಎಷ್ಟು ನಡೆದುಹೋದವಲ್ಲ. ಒಂದಂತೂ ನಿಜ. ನಮ್ಮ ನಡುವಿನ ಕೋಪ ಕ್ಷಣಿಕದ್ದು, ಪ್ರೀತಿ ಮಾತ್ರ ಶಾಶ್ವತವಾದದ್ದು.ಗೋಡೆ ಮೇಲೆ ನಮ್ಮ ಹೆಸರು ಗೀಚಿದ್ದು, ಮೇಷ್ಟ್ರು ಪಾಠ ಮಾಡುತ್ತಿದ್ದಾಗ ನನ್ನತ್ತ ರಾಕೆಟ್ ಹಾರಿಸಿದ್ದು, ಇದೇ ಕಾರಣಕ್ಕೆ ಲೆಕ್ಚರರ್ ಬಳಿ ಬೈಸಿಕೊಂಡಿದ್ದು. ಕ್ಲಾಸ್‌ಗೆ ಬಂಕ್ ಹಾಕಿ ಜೊತೆಗೆ ಫಿಲಂ ನೋಡಿದ್ದು, ಲಾಸ್ಟ್ ಬೆಂಚಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದದ್ದು… ಎಲ್ಲವನ್ನೂ ನೆನೆಯಲು ಈಗ ತುಂಬಾ ಹಿತಕರವೆನಿಸುತ್ತದೆ.
Advertisement
ನಿನ್ನ ಪರಿಚಯವಾದಾಗಿನಿಂದ ನಾನು ನಿನ್ನ ಮಡಿಲಲ್ಲಿರುವ ಮಗುವಿನಂತಾಗಿರುವೆ. ನಿನ್ನನ್ನು ಕಂಡರೆ ಅದೇನೋ ವಾತ್ಸಲ್ಯ, ಮಮತೆ. ನಿನ್ನ ಬಳಿ ಎಲ್ಲವನ್ನೂ ಹೇಳಿಕೊಳ್ಳುವಾಸೆ. ನನ್ನೆಲ್ಲಾ ಕಷ್ಟ ಸುಖಗಳಲ್ಲಿ ನಿನ್ನನ್ನು ಭಾಗಿಯಾಗಿಸಿಕೊಳ್ಳೋ ಆಸೆ. ಆದರೂ ಆ ದಿನ ಯಾಕೆ ಹಾಗೆ ಮಾಡಿದೆ ಅನ್ನೋದಕ್ಕೆ ಉತ್ತರ ನನಗೂ ತಿಳಿದಿಲ್ಲ.
Related Articles
Advertisement