Advertisement

ಸೀರೆ ಉಡಿಸೋ ಕೆಲಸ

09:01 PM Nov 05, 2019 | Lakshmi GovindaRaju |

ಕೈಯಲ್ಲೊಂದು ಕೆಲಸ, ಕೈ ತುಂಬಾ ಸಂಬಳ ಪಡೆವ ಜನ ಪಾರ್ಟ್‌ ಟೈಮ್‌ ಜಾಬ್‌ ಮಾಡುವುದು ಅಪರೂಪ. ಹೇಗೂ ವಾರವಿಡೀ ದುಡಿದಿರುತ್ತೇವೆ. ರಜೆ ಸಿಕ್ಕಾಗ ಆರಾಮಾಗಿರಬೇಕು ಅಂತ ಯೋಚಿಸುವವರೇ ಹೆಚ್ಚು. ಆದರೆ, ಕೇರಳದ ಕಾರ್ತಿಕಾ ರಘುನಾಥ್‌ ಹಾಗಲ್ಲ. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದರೂ, ವಾರಾಂತ್ಯದಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದಾರೆ. ಯಾವ ಕೆಲಸ ಗೊತ್ತಾ? ಸೀರೆ ಉಡಿಸುವ ಕೆಲಸ!

Advertisement

ಕಾರ್ತಿಕಾಗೆ , ಬಾಲ್ಯದಿಂದಲೂ ಸೀರೆ ಕಂಡರೆ ವ್ಯಾಮೋಹ. ಯಾವ ಸೀರೆಯನ್ನು ಬೇಕಾದರೂ ಚಕಚಕನೆ ಉಟ್ಟು, ಸಲೀಸಾಗಿ ನಡೆಯಬಲ್ಲ ಇವರು, ಸೀರೆ ಉಡಿಸುವುದರಲ್ಲಿಯೂ ಸಿದ್ಧಹಸ್ತೆ. ಗೆಳೆಯರ ಸಲಹೆಯಂತೆ, ಇನ್‌ಸ್ಟಾಗ್ರಾಮ್‌ನಲ್ಲಿ ಡ್ರೇಪ್‌ಸೊರೀಸ್‌ ಬೈ ಕಾರ್ತಿ ಎಂಬ ಪೇಜ್‌ ತೆರೆದ ನಂತರ ಆಕೆಗೆ ಬಹಳ ಜನಪ್ರಿಯತೆ ಸಿಕ್ಕಿತು. ಕಾಂಜೀವರಂ, ಧರ್ಮಾವರಂನಂಥ ಸೀರೆಗಳನ್ನೂ ಬರೀ ಐದು ನಿಮಿಷದಲ್ಲಿ ಉಡಿಸಬಲ್ಲ ಆಕೆ, ಈಗಂತೂ ಬಹಳ ಬ್ಯುಸಿ. ವಾರಪೂರ್ತಿ ಎಂಜಿನಿಯರ್‌ ಆಗಿ, ವಾರಾಂತ್ಯದಲ್ಲಿ ಸೀರೆ ಸ್ಟೈಲಿಶ್‌ ಆಗಿ ದುಡಿವ ಕಾರ್ತಿಕಾ, ಕೆಲವೊಮ್ಮೆ ಬೆಳಗ್ಗೆ ಯೇ ಮದುವೆ ಛತ್ರಕ್ಕೆ ಹೋಗಿ, ಸೀರೆ ಉಡಿಸಿ, ನಂತರ ಆಫೀಸ್‌ಗೆ ಬರುತ್ತಾರಂತೆ.

(ಕೃಪೆ: ಮನೋರಮಾ)

Advertisement

Udayavani is now on Telegram. Click here to join our channel and stay updated with the latest news.

Next