Advertisement

ಕುಪ್ಪಸದ ತೋಳು 

11:48 AM Nov 03, 2017 | |

ಹಿಂದಿನ ಅಂಕಣದಲ್ಲಿ ಹಲವು ಬಗೆಯ ತೋಳುಗಳ ಮಾದರಿಗಳ ಬಗೆಗೆ ಕೆಲವು ಮಾಹಿತಿಗಳನ್ನು ಓದಿದ್ದೀರಿ. ಇನ್ನೂ ಹಲವು ಬಗೆಯ ತೋಳುಗಳ ಮಾದರಿಗಳನ್ನು ಪ್ರಯತ್ನಿಸಬೇಕಾದಲ್ಲಿ ಈ ಕೆಳಗಿನ ತೋಳುಗಳ ಬಗೆಗೆ ಒಂದಿಷ್ಟು ಗಮನ ಹರಿಸೋಣ…

Advertisement

1ಬೆಲ್ ಸ್ಲೀವ್ಸ್: ಫ್ಯಾಷನ್‌ ಲೋಕದ ಎಲ್ಲ ಹೊಸ ಉತ್ಪನ್ನಗಳೂ ಹಳೆಯ ಫ್ಯಾಷನ್ನಿನಿಂದ ಪ್ರೇರಿತವಾಗಿರುತ್ತವೆ. ಅದಕ್ಕೆ ಉದಾಹರಣೆಯೆಂದರೆ, ಬೆಲ್ ಸ್ಲೀವ್ಸ್ ಇವುಗಳು ಮರುಕಳಿಸಿ ಮರುಕಳಿಸಿ ಬರುವಂತಹ ಟ್ರೆಂಡಾಗಿದೆ. ಸ್ಲೀವ್ಸ್ನ ತುದಿಯಲ್ಲಿ ಅಗಲವಾಗಿರುವ ಅಥವಾ ಫ್ರಿಲ್ಲುಗಳನ್ನು ನೀಡಿ ತೋಳಿಗೂ ಕೂಡ ಬೆಲ್ ಲುಕ್ಕನ್ನು ನೀಡಲಾಗಿರುತ್ತವೆ. ಸೀರೆ ಬ್ಲೌಸುಗಳಲ್ಲಿ ಈ ಬಗೆಯ ತೋಳುಗಳು ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತಿವೆಯಷ್ಟೆ ಎಂದರೆ ತಪ್ಪಾಗಲಾರದು.

2ಬಾಕ್ಸಿ ಸ್ಲೀವ್ಸ್: ಇವುಗಳು ಹೆಸರೇ ಹೇಳುವಂತೆ ಆಯತಾಕಾರದ ತೋಳುಗಳು. ಈ ಬಗೆಗಳು ಹೆಚ್ಚಾಗಿ ಬ್ಲೌಸುಗಳಿಗಿಂತಲೂ ಟಾಪುಗಳಲ್ಲಿ ಮತ್ತು ಮಾಡರ್ನ್ ದಿರಿಸುಗಳಲ್ಲಿ ಕಾಣಸಿಗುತ್ತವೆ. ನೋಡಲು ಟ್ರೆಂಡಿ ಮತ್ತು ಹೊಸ ಸ್ಟೈಲ್ ಸ್ಟೇಟೆಟನ್ನು ಸೃಷ್ಟಿಸುವಷ್ಟು ವಿನೂತನವಾದ ಮಾದರಿಯಾಗಿದೆ. ಇವುಗಳು ಹೆಚ್ಚಾಗಿ ಸಿಂಥೆಟಿಕ್‌ ಬಟ್ಟೆಗಳಿಗೆ ಸೂಕ್ತವೆನಿಸುತ್ತವೆ. ದಪ್ಪವಾಗಿರುವವರಿಗಿಂತ ಬದಲಾಗಿ ತೆಳ್ಳಗಿರುವವರು ಧರಿಸುವುದು ಉತ್ತಮ.

3ಬಟರ್‌ ಫ್ಲೈ ಸ್ಲೀವ್ಸ್: ಬಹಳ ಬಬ್ಲಿ ಲುಕ್ಕನ್ನು ನೀಡುವ ಇವುಗಳು ನಿಮ್ಮ ಸೀರೆಯ ಅಂದವನ್ನು ಹೆಚ್ಚಿಸುವಲ್ಲಿ ಸಂಶಯವಿಲ್ಲ. ಹೆಸರಿಗೆ ತಕ್ಕಂತೆ ಚಿಟ್ಟೆಯ ರೆಕ್ಕೆಗಳಂತೆ ಕಾಣುವ ಈ ಬಗೆಯ ಸ್ಲೀವ್ಸ್ ಇತ್ತೀಚೆಗೆ ಸೀರೆಗಳ ಬ್ಲೌಸುಗಳಲ್ಲಿಯೂ ಬಳಸಲ್ಪಡುತ್ತಿದೆ. ಬಬ್ಲಿ  ಲುಕ್ಕನ್ನು ನೀಡುವ ಇವುಗಳು ಸುಂದರವಾಗಿರು ತ್ತವೆ. ಟೀನೇಜರ್ಸ್‌ ಮತ್ತು ಯಂಗ್‌ ಮಹಿಳೆಯರು ಈ ಬಗೆಯ ಸ್ಲೀವ್ಸ್ ಗಳನ್ನು ಸೀರೆಗಳ ಬ್ಲೌಸುಗಳಲ್ಲಿ ಬಳಸಲು ಇಚ್ಛಿಸುತ್ತಾರೆ. ಸಿಂಥೆಟಿಕ್‌ ಬಟ್ಟೆಗಳಿಗೆ ಹೆಚ್ಚು ಹೊಂದಿಕೊಳ್ಳುವ ಬಗೆಯ ಸ್ಲಿವ್‌  ಇದಾಗಿವೆ. 

4 ಸ್ಲಿಟ್ ಸ್ಲೀವ್ಸ್: ಶಾರ್ಟ್‌ ಮತ್ತು ತ್ರಿ-ಫೋರ್ತ್‌ ಸ್ಲೀವ್ಸ್ಗಳಿಗೆ ತುದಿಯಲ್ಲಿ ಸ್ಲಿಟ್ ಕೊಡುವುದರ ಮೂಲಕ ಸಾಧಾರಣ ಬ್ಲೌಸುಗಳನ್ನು ಸುಂದರವಾಗಿಸಬಹುದಾಗಿದೆ. ಇವುಗಳು ಸಿಂಪಲ್ಲಾದ ಲುಕ್ಕನ್ನು ನೀಡುತ್ತವೆ. ಎಲ್ಲಾ ಬಗೆಯ ಸೀರೆಗಳಿಗೂ ಸರಿಹೊಂದುತ್ತವೆ. 

Advertisement

5ಪೆಟಲ್ ಸ್ಲೀವ್ಸ್: ಇವು ಎಥಿ°ಕ್‌ ಸೀರೆಗಳ ಬ್ಲೌಸುಗಳೊಂದಿಗೆ ಈ ಬಗೆಯ ಪೆಟಲ್ ಸ್ಲೀವ್ಸ್ ಬಹಳ ಒಪ್ಪುತ್ತವೆ.  ಹೂವಿನ ದಳದಂತೆ ಒಂದರ ಮೇಲೊಂದು ಬಂದಂತಿರುವ  ಬಗೆಯಾಗಿದೆ. ನೋಡಲು ಬಹಳ ಸುಂದರವಾಗಿರುವ ತೋಳುಗಳಾಗಿರುತ್ತವೆ. ತುದಿಯಲ್ಲಿ V ಆಕಾರ ಬರುವುದರಿಂದ ಅದಕ್ಕೆ ನಿಮಗೆ ಬೇಕಾದ ಲಟ್ಕನನ್ನು ಬಳಸಿಕೊಳ್ಳಬಹುದು. ಪೆಟಲ್ಲುಗಳ ತುದಿಗಳಿಗೆ ಪೈಪಿಂಗ್‌ ಅನ್ನು ಕೊಡುವುದರಿಂದ ಇನ್ನು ಸುಂದರವಾಗಿ ಕಾಣುತ್ತವೆ.

6ಬಿಶಪ್‌ ಸ್ಲೀವ್ಸ್: ಇವುಗಳು ಭುಜ ಮತ್ತು ಕೈ ತುದಿಯಲ್ಲಿ ಫಿಟ್ಟಿಂಗ್‌ ಇದ್ದು ಮಧ್ಯದಲ್ಲಿ ಬಬ್ಲಿ ಅಥವಾ ಫ್ಲೇರಿಯಾಗಿರುತ್ತವೆ. ಸಾಮಾನ್ಯವಾಗಿ ತುದಿಯಲ್ಲಿ ಇಲ್ಯಾಸ್ಟಿಕ್‌ ಅನ್ನು ಬಳಸಲಾಗುತ್ತದೆ. ಇವುಗಳನ್ನು ಸೀರೆಗಳ ಬ್ಲೌಸುಗಳಿಗೆ ತೋಳುಗಳನ್ನಾಗಿ ಬಳಸಬಹುದು. ಇವುಗಳೂ ಕೂಡ ಫ್ಯೂಷನ್‌ ಲುಕ್ಕನ್ನು ನೀಡುತ್ತವೆ. 

7ರಗ್ಲಾನ್‌: ಇವುಗಳು ವಿನೂತನವಾದ ಮಾದರಿಯ ತೋಳುಗಳಾಗಿವೆ. ತೋಳಿನ ತುದಿಯಿಂದ ಕಾಲರ್‌ವರೆಗೆ ಒಂದೇ ಬಟ್ಟೆ ಎಕ್ಸೆಡ್‌ ಆಗುವಂತದ್ದಾಗಿದೆ. ತೋಳು ಮತ್ತು ಬಾಡಿ ಭಾಗಗಳು ಒಂದಕ್ಕೊಂದು ಕಾಂಟ್ರಾಸ್ಟ್ ಬಣ್ಣಗಳಲ್ಲಿದ್ದರೆ ಲುಕ್ಕನ್ನು ಟ್ರೆಂಡಿಯನ್ನಾಗಿಸುತ್ತದೆ. ಟಾಪುಗಳಲ್ಲಿ ಈ ಬಗೆಯ ಸ್ಲೀವ್ಸ್ ಸಾಮಾನ್ಯವಾಗಿ  ಕಾಣಸಿಗುತ್ತವೆ. ಈ ಬಗೆಯನ್ನು ಸೀರೆಯ ಬ್ಲೌಸುಗಳಲ್ಲಿ ಬಳಸಿಕೊಳ್ಳಬಹುದು. ಸೀರೆಯನ್ನು ಫ್ಯಾಷನೇಬಲ… ದಿರಿಸನ್ನಾಗಿ ಮಾಡುತ್ತವೆ. 

8ಫ್ಲವರ್‌ ಪ್ಯಾಚ್‌ ಸ್ಲೀವ್ಸ್: ತೋಳುಗಳಿಗೆ ಮಾತ್ರ ಫ್ಲವರ್‌ ಪ್ಯಾಚ್‌ಗಳನ್ನು ಹಾಕವುದರ ಮೂಲಕ ಸ್ಲೀವ್ಸ್ಗಳನ್ನು ಹೈಲೈಟ್‌ ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಬಗೆ ಬಗೆಯ ಪ್ಯಾಚ್‌ಗಳು ದೊರೆಯುತ್ತವೆ. ಅವುಗಳನ್ನು ಬಣ್ಣಗಳಿಗನುಗುಣವಾಗಿ, ಬ್ಲೌಸಿನ ಬಟ್ಟೆಗಳಿಗನುಗುಣವಾಗಿ ಆಯ್ಕೆ ಮಾಡುವುದರ ಮೂಲಕ  ಟ್ರೆಂಡಿ ಲುಕ್ಕನ್ನು ಪಡೆಯಬಹುದಾಗಿದೆ.

9ಕಿಮೊನೊ ಸ್ಲೀವ್ಸ್: ಇವುಗಳು ಸಡಿಲವಾಗಿರುವ ತೋಳುಗಳು. ಧರಿಸಲು ಬಹಳ ಆರಾಮದಾಯಕವಷ್ಟೇ ಅಲ್ಲದೆ ನೋಡಲು ಬಬ್ಲಿ ಲುಕ್ಕನ್ನು ನೀಡುತ್ತವೆ. ಕೈಗಳನ್ನು ಸುಲಭವಾಗಿ ಆಡಿಸಲು ಅಥವಾ ಆರಾಮದಾಯಕ ಮೇಲೆಕೆಳಗೆ ಮಾಡಲು ಸಾಧ್ಯವಿರುವುದು ಇವುಗಳ ವಿಶೇಷತೆಯಾಗಿದೆ.

10ರೋಲ್ ಅಪ್‌ ಸ್ಲೀವ್ಸ್: ಇವುಗಳು ಮಹಿಳೆಯರ ಮತ್ತು ಪುರುಷರ ಶರ್ಟುಗಳಲ್ಲಿ ಕಾಣಸಿಗುವ ತೋಳುಗಳಿಂದ ಪ್ರೇರಿತವಾಗಿ ಮಾದರಿಗೊಳಿಸಿದ ಬಗೆಯಾಗಿದೆ. ಈ ರೀತಿಯ ಬ್ಲೌಸುಗಳನ್ನು ಟೈಲರ್‌ ಬಳಿ ನಾವೇ ಹೇಳಿ ಡಿಸೈನ್‌ ಮಾಡಿಕೊಳ್ಳಬಹುದಾಗಿದೆ. ಉದ್ದ ತೋಳಿನ ಬ್ಲೌಸನ್ನು ತಯಾರಿಸಿ ಅದಕ್ಕೆ ಬಟನನ್ನು ಇಡುವುದರ ಮೂಲಕ ಅವುಗಳನ್ನು ರೋಲ್ ಮಾಡಿ ಬಟನ್‌ ಹಾಕಿದರೆ ರೋಲ… ಅಪ್‌ ಸ್ಲೀವ್ಸ್ ತಯಾರಾಗುತ್ತವೆ. ಇವುಗಳನ್ನು ಧರಿಸುವುದರಿಂದ ಸುತ್ತಲಿನವರಿಂದ ನಿಮ್ಮನ್ನು ವಿಶೇಷವಾಗಿ ಮತ್ತು ಭಿನ್ನವಾಗಿ ಕಾಣುವಂತೆ ಮಾಡುತ್ತವೆ. 
 
11ನೆಟ್ಟೆಡ್‌ ಸ್ಲೀವ್ಸ್: ಕಾಟನ್‌ ಅಥವಾ ಸಿಂಥೆಟಿಕ್‌ ಬಟ್ಟೆಗಳ ಬ್ಲೌಸುಗಳಿಗೆ ಮ್ಯಾಚಿಂಗ್‌ ಅಥವಾ ಕಾಂಟ್ರಾಸ್ಟ್ ಬಣ್ಣದ ನೆಟ್
ತೋಳುಗಳನ್ನು ಕೊಡಿಸುವುದು ಬ್ಲೌಸುಗಳನ್ನು ಸುಂದರವನ್ನಾಗಿಸುತ್ತದೆ. ನೆಟ್ಟೆಡ್‌ ತೋಳುಗಳನ್ನು ಫ‌ುಲ್ ತೋಳು ಅಥವಾ ಹಾಫ್ ತೋಳುಗಳಾಗಿ ಹೊಲಿಸಿಕೊಳ್ಳಬಹುದು. ನೆಟ್ಟೆಡ್‌  ತೋಳುಗಳು ಸುಂದರವಾಗಿಯೂ, ಟ್ರೆಂಡಿಯಾಗಿಯೂ ಕಾಣುತ್ತವೆ.

12ಸ್ಟ್ರಾಪ್‌ ಸ್ಲೀವ್ಸ್: ಇವುಗಳು ಕೂಡ ಎವರ್‌ಗ್ರೀನ್‌ ತೋಳುಗಳು. ಡ್ರೆಸ್ಸುಗಳಲ್ಲಿ, ಗೌನುಗಳಲ್ಲಿ, ಫ್ಯೂಷನ್‌ ಡ್ರೆಸ್ಸುಗಳಲ್ಲಿ ನೋಡಸಿಗುತ್ತವೆ. ಈ ಬಗೆಯ ತೋಳುಗಳನ್ನು ಸೀರೆಯ ಬ್ಲೌಸುಗಳಲ್ಲಿಯೂ ಬಳಸಿಕೊಳ್ಳಬಹುದಾಗಿದೆ. ಇವುಗಳು ತೋಳಿಲ್ಲದ ಬಗೆಯಾಗಿದೆ. ಆದರೆ ಶೌಲ್ಡರ್‌ನಲ್ಲಿ ಸ್ಟ್ರಾಪ್‌ ಅನ್ನು ಜೋಡಿಸಲಾಗಿರುತ್ತದೆ.

    ಈ ಎಲ್ಲಾ ಬಗೆಯ ತೋಳುಗಳನ್ನು ಆರಿಸಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಶೋಲ್ಡರ್‌ನ ವಿಧಗಳು, ಬಣ್ಣಗಳು, ಬ್ಲೌಸಿನ ಬಟ್ಟೆಗಳ ವಿಧಗಳು, ಸೀರೆಗಳ ವಿಧಗಳು, ಧರಿಸುವ ಸಂದರ್ಭಗಳು ಇನ್ನಿತರ ಅಂಶಗಳನ್ನು ಆಧರಿಸಿ ಆಯ್ಕೆಮಾಡಬೇಕಾಗುತ್ತದೆ. ಹೀಗೆ ಸಾಂಪ್ರದಾಯಿಕ ಸೀರೆಗಳಿಗೆ ಕ್ಲಾಸಿ ಆದ ಮಾಡರ್ನ್ ಟಚ್‌ ಅನ್ನು ಕೊಡುವ ತೋಳುಗಳನ್ನು ಬಳಸಿಕೊಂಡು ನಿಮ್ಮ ಬ್ಲೌಸುಗಳನ್ನು ಡಿಸೈನರ್‌ ಬ್ಲೌಸುಗಳನ್ನಾಗಿ ಮಾಡಿಕೊಳ್ಳಬಹುದಾಗಿದೆ. 

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next