Advertisement

ಹಾಕಿ ಶಿಬಿರಕ್ಕೆ 55 ಸಂಭಾವ್ಯ ಆಟಗಾರರು

07:05 AM Apr 27, 2018 | |

ಬೆಂಗಳೂರು: ಮಾಜಿ ನಾಯಕ ಸರ್ದಾರ್‌ ಸಿಂಗ್‌ ಸಹಿತ 55 ಸಂಭಾವ್ಯ ಆಟಗಾರರನ್ನು ಹಾಕಿ ಇಂಡಿಯಾ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡಿದೆ. ಶಿಬಿರವು ಶುಕ್ರವಾರದಿಂದ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ನಡೆಯಲಿದೆ.

Advertisement

ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ಆಯ್ಕೆ ಮಾಡಲಾಗಿದ್ದ ಮನ್‌ಪ್ರೀತ್‌ ಸಿಂಗ್‌ ನೇತೃತ್ವದ 18 ಸದಸ್ಯರ ತಂಡದಿಂದ ಕೈಬಿಡಲಾಗಿದ್ದ ಸರ್ದಾರ್‌ ಅವರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಮೇ 18ರಂದು ಶಿಬಿರ ಅಂತ್ಯಗೊಂಡ ಬಳಿಕ ಈ ಸಂಖ್ಯೆಯನ್ನು 48ಕ್ಕೆ ಇಳಿಸಲಾಗುವುದು.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ ಎಲ್ಲ 18 ಮಂದಿಯೂ ಈ ಸಂಭಾವ್ಯರ ಪಟ್ಟಿಯಲ್ಲಿ ಸೇರಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ನ ಕಂಚಿಗಾಗಿ ನಡೆದ ಪಂದ್ಯದಲ್ಲಿ ಭಾರತವು ಇಂಗ್ಲೆಂಡಿಗೆ 1-2ರಿಂದ ಶರಣಾಗಿ ನಾಲ್ಕನೇ ಸ್ಥಾನ ಪಡೆದಿತ್ತು.

ಫಾರ್ವರ್ಡ್‌ ಆಟಗಾರ ರಮಣ್‌ದೀಪ್‌ ಸಿಂಗ್‌, ಡಿಫೆಂಡರ್‌ಗಳಾದ ಸುರೇಂದರ್‌ ಕುಮಾರ್‌, ಬಿರೇಂದರ್‌ ಲಾಕ್ರ, ದಿಪ್ಸನ್‌ ತಿರ್ಕೆ ಮತ್ತು ಸಂಜೀಬ್‌ ಕ್ಸೆಸ್‌ ಅವರು 55 ಸದಸ್ಯರ ತಂಡದಲ್ಲಿ ಸೇರಿದ್ದಾರೆ. ದೇಶೀಯ ಸರ್ಕ್ನೂಟ್‌ನಲ್ಲಿ ಆಡುತ್ತಿರುವ ಆಟಗಾರರೂ ಈ ಪಟ್ಟಿಯಲ್ಲಿದ್ದಾರೆ.

ಸುಧಾರಣೆ ತರಬೇಕಾಗಿದೆ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ನಾವು ನಿರೀಕ್ಷಿಸಿದ ಫ‌ಲಿತಾಂಶ ಬಂದಿಲ್ಲ ಆದರೆ ಅಲ್ಲಿ ಕಲಿತ ಪಾಠಗಳನ್ನು ಭವಿಷ್ಯದ ಸಿದ್ಧತೆಗಳ ವೇಳೆ ಬಳಸಿಕೊಳ್ಳಲಾಗುವುದು. ಆಟವಾಡುವ ರಚನೆ ಬಗ್ಗೆ ತಂಡ ಮತ್ತು ತರಬೇತಿ ಸಿಬಂದಿಗಳಲ್ಲಿ ಆತ್ಮವಿಶ್ವಾಸವಿದೆ ಮತ್ತು ಕೆಲವೊಂದು ವಿಷಯಗಳಲ್ಲಿ ನಾವು ನಮ್ಮ ಆಟದಲ್ಲಿ ಸುಧಾರಣೆ ತರಬೇಕಾಗಿದೆ ಎಂದು ಮುಖ್ಯ ಕೋಚ್‌ ಜೋರ್ಡ್‌ ಮರಿಜ್ನೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next