Advertisement

ನಾನು ಕಲ್ಕಿ ಭಗವಾನ್‌, ಕಚೇರಿಗೆ ಬರಲ್ಲ!

06:00 AM May 19, 2018 | |

ಅಹ್ಮದಾಬಾದ್‌: “ನಾನು ವಿಷ್ಣುವಿನ 10ನೇ ಅವತಾರವಾದ ಕಲ್ಕಿ. ಜಗತ್ತಿನ ಕಲ್ಯಾಣಕ್ಕಾಗಿ ನಾನು ತಪಸ್ಸನ್ನು ಮಾಡುತ್ತಿದ್ದೀನಿ. ಹಾಗಾಗಿ ನನಗೆ ಕಚೇರಿಗೆ ಬರಲು ಸಾಧ್ಯವಿಲ್ಲ’. ಗುಜರಾತ್‌ನ ಸರ್ದಾರ್‌ ಸರೋವರ್‌ ಪುನರ್ವಸತಿ ಆಯೋಗದಲ್ಲಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಆಗಿರುವ ರಮೇಶ್‌ ಚಂದ್ರ ಫೆಫ‌ರ್‌, ತಮ್ಮ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದಿರುವುದಕ್ಕೆ ನೀಡಿರುವ ಉತ್ತರವಿದು. 

Advertisement

ಈ ಮಹಾಶಯರು 8 ತಿಂಗಳಲ್ಲಿ ಕಚೇರಿಗೆ ಬಂದಿರುವುದು ಕೇವಲ 16 ದಿನ ಮಾತ್ರ. ಹಾಗಾಗಿ, ಸರ್ಕಾರ ನೋಟಿಸ್‌ ಕಳುಹಿಸಿದೆ. ಇದಕ್ಕೆ ಉತ್ತರಿಸಿರುವ ಅವರು, “”2010ರ ಮಾರ್ಚ್‌ನಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನಾನು ಕಲ್ಕಿಯೆಂಬುದು ಮನದಟ್ಟಾಯಿತು. ಆಗಿನಿಂದಲೇ ನನ್ನಲ್ಲಿ ದೈವೀಶಕ್ತಿಗಳು ಮೈಗೂಡಿವೆ. ಲೋಕ ಕಲ್ಯಾಣಕ್ಕೆ ತಪಸ್ಸು ಮಾಡುತ್ತಿದ್ದೇನೆ. ನನ್ನ ತಪಸ್ಸಿನಿಂದಲೇ ದೇಶದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಕಚೇರಿಗೆ ಬರುವುದಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next