Advertisement

ಸರಸ್ವತಿ ಪೂಜೆ: ಸಿಯುಕೆಯಲ್ಲಿ ವಿದ್ಯಾರ್ಥಿ ಗುಂಪುಗಳ ಮಧ್ಯೆ ಗಲಾಟೆ

07:58 PM Feb 14, 2024 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಇರುವ ಕೇದ್ರೀಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಬುಧವಾರ ಬೆಳಗ್ಗೆ ಸರಸ್ವತಿ ಪೂಜೆ ಸಂಬಂಧ ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ಗಲಾಟೆಯಾಗಿ ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತವಾದ ಘಟನೆ ವರದಿಯಾಗಿದೆ.

Advertisement

ಕೆಲ ದಿನಗಳ ಹಿಂದೆ ಅಂಬೇಡ್ಕರ್ ಜಯಂತಿ ಪ್ರಯುಕ್ತ, ಆಡಳಿತ ಕಚೇರಿ ಮುಂದಿರುವ ಅಂಬೇಡ್ಕರ್ ಮೂರ್ತಿಗೆ ಬಣ್ಣ ಬಳಿಯಲು ಹೋದಾಗ ಸಿಯುಕೆ ಸೆಕ್ಯೂರಿಟಿ ಅಧಿಕಾರಿ ಅಡ್ಡಪಡಿಸಿ ಈ ಮೂರ್ತಿ ಅಧಿಕೃತವಲ್ಲ. ಇದಕ್ಕೆ ಯಾವುದೇ ಕಾರಣಕ್ಕೂ ಬಳ್ಳ ಬಳಿಯ ಬಾರದು ಎಂದು ವಿದ್ಯಾರ್ಥಿಗಳನ್ನು ಬೆದರಿಸಿ ಅಲ್ಲಿಂದ ಚದುರಿಸಿದರು. ಸದ್ಯ ಸಿಯುಕೆ ಆವರಣದಲ್ಲಿ ಶಾಂತಿ ಕಾಯ್ದುಕೊಳ್ಳಲಾಗಿದ್ದು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ ಬುಧವಾರ ಸಿಯುಕೆ ನ ಗ್ರಂಥಾಲಯ ಹಾಗೂ ಎಜುಕೇಶನ್ ವಿಭಾಗದಲ್ಲಿ ಸರಸ್ವತಿ ಹಾಗೂ ಗಣೇಶ ಪೂಜೆ ಮಾಡುವುದಲ್ಲದೆ ಹವನ ಹೋಮ ಮಾಡುತ್ತಿರುವಾಗ ಅಲ್ಲಿಗೆ ತೆರಳಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಈ ಪೂಜೆ ಹಾಗೂ ಹೋಮ ಮಾಡುವುದು ಅಧಿಕೃತವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪೂಜೆಯನ್ನು ತಡೆಯಲು ಯತ್ನಿಸಿದ್ದಾರೆ.

ಆಗ ಸ್ಥಳದಲ್ಲಿದ್ದ ಎಬಿವಿಪಿ ಸಂಘಟನೆಗೆ ಸೇರಿದ ಹಲವು ವಿದ್ಯಾರ್ಥಿಗಳು ಇವರನ್ನು ತಡೆಯಲು ಯತ್ನಿಸಿದ್ದಾರೆ. ಆಗ ಎರಡು ಗುಂಪುಗಳ ಮಧ್ಯೆ ಗಲಾಟೆ ಆಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಕಡಗಂಚಿ ಪೊಲೀಸರು ಧಾವಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆ ಹರಿಸಲು ಪ್ರಯತ್ನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮಧ್ಯೆ ವಾದ, ವಿವಾದವಲ್ಲದೆ ತಳ್ಳಾಟ ನೂಕಾಟಗಳು ನಡೆದಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next