ಬೆಂಗಳೂರು: ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮದ ಕುರಿತಂತೆ ಅವರ ಅಪ್ರತಿಮ ಜ್ಞಾನ, ಸಂಶೋಧನಾತ್ಮಕವಾದ ಅವರ ನಿಲುವುಗಳು ಸಮಾಜದ ಧಾರ್ಮಿಕ ಪ್ರಜ್ಞೆಯನ್ನು ಉದ್ದೀಪಿಸುವಂತಿದ್ದವು. ಅವರ ಸಮಾಜಸೇವೆಯ ತುಡಿತವೂ ಅನುಕರಣೀಯವಾಗಿತ್ತು.
ತಮ್ಮ ಸಂಶೋಧನಾ ಗ್ರಂಥಗಳ ಮೂಲಕ, ಪ್ರವಚನಗಳ ಮೂಲಕ ವ್ಯಾಸ, ಮಧ್ವರಂತಹ ಭಕ್ತಿ ಚೇತನಗಳನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಡಾ. ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಸಾರಸ್ವತ ಲೋಕ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ.
ಇದನ್ನೂ ಓದಿ: ದೇಶ-ವಿದೇಶಗಳಲ್ಲಿ 30,000 ಗಂಟೆ ಉಪನ್ಯಾಸ ಪ್ರವಚನಗೈದ ದಾಖಲೆ: ಬನ್ನಂಜೆ ಸಾಧನೆಯ ಹಾದಿ !
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸುರೇಶ್ ಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಸಂತಾಪ ಸೂಚಿಸಿದ ಡಿಸಿಎಂ ಗೋವಿಂದ ಕಾರಜೋಳ