Advertisement
ಜ. 26ರಂದು ದಹಿಸರ್ ಕಾಶೀ ಮಠದ ಸಭಾಂಗಣದಲ್ಲಿ ನಡೆದ ಮುಂಬಯಿ ರಾಜಾಪುರ ಸಾರಸ್ವತ ಸಂಘ ಆಯೋಜಿಸಿದ ಸಾರಸ್ವತ ಉತ್ಸವ-2019 ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಡಿ, ತನ್ನ ಅಧ್ಯಕ್ಷತೆಯಲ್ಲಿರುವ ಪುತ್ತೂರಿನ ಸರಸ್ವತಿ ಸಹಕಾರಿ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿನ ಅಧ್ಯಯನದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಸಂಸ್ಥೆಯ ಬೆಳವಣಿಗೆಯ ಹಂತದಲ್ಲಿನ ತನ್ನ ಅನುಭವವನ್ನು ಹಂಚಿಕೊಂಡರು.
Related Articles
Advertisement
ಆಮಂತ್ರಿತ ಅತಿಥಿ ಒಟಿಸ್ ಎಲಿವೇಟರ್ ಸಂಸ್ಥೆಯ ಭರತ್ ಎಸ್. ನಾಯಕ್ ಅವರು ಮಾತನಾಡಿ, ವೃತ್ತಿರಂಗದಲ್ಲಿ ನಾವು ಅನುಭವಿಸುವ ಸೋಲುಗಳಿಂದಲೂ ಬದುಕಿನ ಪಾಠ ಕಲಿಯುತ್ತೇವೆ. ಯುವಕರಿಗೆ ಇಂದು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಅದನ್ನು ಸಮರ್ಥವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರ ಮವಾಗಿ ಬೆಳಗ್ಗೆ 9.30ರಿಂದ ಭಕ್ತಿಗೀತೆ, ಭಜನೆ, ದೇಶದ ಸಂಸ್ಕೃತಿಯನ್ನು ಸಾರುವ ನೃತ್ಯ ವೈವಿಧ್ಯ, ಯುವ ವಿಭಾಗದಿಂದ ಜಾಯ್ ಆಫ್ ಗಿವಿಂಗ್ ಕಾರ್ಯಕ್ರಮ ನಡೆಯಿತು. 75 ವರ್ಷ ಮೇಲ್ಪಟ್ಟ ಸಮಾಜದ ಹಿರಿಯರನ್ನು ಗೌರವಿಸಲಾಯಿತು.
ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಪ್ರಭಾಕರ ಜಿ. ಬೋರ್ಕರ್, ಕಾರ್ಯದರ್ಶಿ ಪೂಜಾ ಜೆ. ಕಾಮತ್, ಕೋಶಾಧಿಕಾರಿ ನಿತ್ಯಾನಂದ ಪ್ರಭು, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಾ ವಿ. ನಾಯಕ್, ಕಾರ್ಯದರ್ಶಿ ಸುಲತಾ ಆರ್. ನಾಯಕ್, ಕೋಶಾಧಿಕಾರಿ ಸುನಿತಾ ಎಸ್. ಕಾಮತ್, ಯುವ ವಿಭಾಗದ ಅಧ್ಯಕ್ಷೆ ಮಾಧವಿ ನಾಯಕ್, ಕಾರ್ಯದರ್ಶಿ ವಿರಾಜ್ ನಾಯಕ್, ಕೋಶಾಧಿಕಾರಿ ಮಹೇಶ್ ಪ್ರಭು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗ, ಯುವ ವಿಭಾಗದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾಲ^ರ್, ಥಾಣೆ, ಮುಂಬಯಿಯ ವಿವಿಧೆಡೆಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಚಿತ್ರ-ವರದಿ :
ಪಿ. ಆರ್. ರವಿಶಂಕರ್ ಡಹಾಣೂರೋಡ್