ಮೈಸೂರು: ಧಾರ್ಮಿಕ ದತ್ತಿ ಇಲಾಖೆಯಿಂದ ಚಾಮುಂಡಿಬೆಟ್ಟದಲ್ಲಿ ಸೋಮವಾರ ಆಯೋಜಿಸಿದ್ದ”ಸಪ್ತಪದಿ’ ಸಾಮೂಹಿಕ ಸರಳ ವಿವಾಹದಲ್ಲಿ 14 ವಧು-ವರರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಚಾಮುಂಡೇಶ್ವರಿ ದೇವಸ್ಥಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಎನ್. ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಮಂತ್ರ ಘೋಷಣೆಯೊಂದಿಗೆ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ವಿವಾಹ ಬಂಧನಕ್ಕೆ ಒಳಗಾದವಧುವಿಗೆ 40 ಸಾವಿರ ರೂ. ಮೌಲ್ಯದ ಮಾಂಗಲ್ಯ,ಎರಡು ಚಿನ್ನದ ಗುಂಡು, ವಸ್ತ್ರ ಖರೀದಿಗಾಗಿ 10ಸಾವಿರ ರೂ. ನಗದು, ವರನಿಗೆ 5 ಸಾವಿರ ರೂ. ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು 16 ಜೋಡಿಗಳುನೋಂದಣಿಯಾಗಿದ್ದರೂ, ಕೊನೆ ಗಳಿಗೆಯಲ್ಲಿ ನಂಜನಗೂಡಿನಿಂದ ಬರಬೇಕಿದ್ದ ಎರಡು ಜೋಡಿಗಳು ಗೈರಾಗಿ ದ್ದರಿಂದ 14 ಜೋಡಿಗಳು ಹಸೆಮಣೆ ಏರಿದರು.
ವಧು-ವರರನ್ನು ಆರ್ಶೀರ್ವದಿಸಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಮಕ್ಕಳ ಮದುವೆಗಾಗಿ ಸಾಲ ಮಾಡಿಕೊಂಡವರೆ ಹೆಚ್ಚು. ಜೊತೆಗೆ ಮದು ವೆಗೆ ಮಾಡಿದ್ದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ. ಹಾಗಾಗಿ ಅದ್ಧೂರಿಮದುವೆ ಮಾಡಿ ಜನರು ಸಂಕಷ್ಟಕ್ಕೀಡಾಗಬಾರದುಎನ್ನುವ ಉದ್ದೇಶದಿಂದ ಸರ್ಕಾರವೇ ತಾಳಿ, ಬಟ್ಟೆಕೊಟ್ಟು ಸರಳವಾಗಿ ಸಾಮೂಹಿಕ ವಿವಾಹ ಮಾಡಿಸಲುಮುಂದಾಗಿದೆ. ಜನರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳದೆ ಮಕ್ಕಳಿಗೆ ಸಾಮೂಹಿಕ ವಿವಾಹ ಮಾಡಿ ಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಸರಳ ಮದುವೆಗೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ. ಜನರು ಅದ್ಧೂರಿ ಮದುವೆ ಬಿಟ್ಟು ಸರಳ ರೀತಿಯಲ್ಲಿ ಮದುವೆ ಮಾಡಲು ಮುಂದಾಗಬೇಕುಎಂದರು. ಈ ಸಂದರ್ಭದಲ್ಲಿ ಜಿÇÉಾ ಪಂಚಾಯಿತಿಅಧ್ಯಕ್ಷೆ ಪರಿಮಳಾ ಶ್ಯಾಂ, ಮೃಗಾಲಯ ಪ್ರಾಧಿಕಾರದಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕನ್ನಡ ಪುಸ್ತಕಪ್ರಾಧಿ ಕಾರದ ಅಧ್ಯಕ್ಷ ನಂದೀಶ್ ಹಂಚೆ, ಮೈಲ್ಯಾಕ್‌ಅಧ್ಯಕ್ಷ ಎನ್.ವಿ.ಫಣೀಶ್, ಗ್ರಾಪಂ ಅಧ್ಯಕ್ಷ ಕೆ.ಭರತ್,ಉಪಾಧ್ಯಕ್ಷೆ ತುಳಸಿ, ಮುಡಾ ಮಾಜಿ ಅಧ್ಯಕ್ಷ ವಿಜಯ್,ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಯತಿರಾಜ್ ಸಂಪತ್‌ಕುಮಾರ್ ಇತರರು ಉಪಸ್ಥಿತರಿದ್ದರು.
ವಿವಿಧೆಡೆ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ :
ಮುಜರಾಯಿ ಇಲಾಖೆಯಿಂದ ಆಯೋಜಿಸಿರುವ ಜಿಲ್ಲೆಯ ವಿವಿಧೆಡೆ ಸಪ್ತಪದಿ ಸಾಮೂಜಿಕ ವಿವಾಹ ಆಯೋಜಿಸಲಾಗಿದ್ದು, ಏಪ್ರಿಲ್ 22ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ, ಮೇ 17ರಂದು ಮುಡುಕುತೊರೆ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ, ಜೂನ್ 17ರಂದು ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ವಿವಾಹ ನೆರವೇರಲಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.