Advertisement

Sapthami Gowda: ‘ಕಾಂತಾರ-1’ ಚಿತ್ರದಲ್ಲಿ ನಟಿಸುತ್ತಾರಾ ಸಪ್ತಮಿ ; ನಟಿ ಹೇಳಿದ್ದೇನು?

02:33 PM Apr 15, 2024 | Team Udayavani |

ರಿಷಭ್‌ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ’ ಚಿತ್ರ ಸೂಪರ್‌ ಹಿಟ್‌ ಆಗುವ ಮೂಲಕ ಆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಕೆರಿಯರ್‌ಗೂ ಒಂದೊಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತು. ಈಗ “ಕಾಂತಾರ-1′ ಪ್ರೀಕ್ವೆಲ್‌ನ ಮುಹೂರ್ತ ಆಗಿ, ಭರ್ಜರಿ ತಯಾರಿಯಲ್ಲಿದೆ ಚಿತ್ರತಂಡ.

Advertisement

“ಕಾಂತಾರ’ ಚಿತ್ರದ ಲೀಲಾ ಪಾತ್ರದ ಮೂಲಕ ಗಮನ ಸೆಳೆದ ಸಪ್ತಮಿ ಗೌಡ “ಕಾಂತಾರ-1’ನಲ್ಲಿ ಇರುತ್ತಾರಾ ಎಂಬ ಕುತೂಹಲ ಅನೇಕರಿಗಿತ್ತು. ಈಗ ಆ ಕುತೂಹಲಕ್ಕೆ ಸ್ವತಃ ಸಪ್ತಮಿ ಉತ್ತರಿಸಿದ್ದಾರೆ.

“ಕಾಂತಾರ-1’ನಲ್ಲಿ ನಾನು ನಟಿಸುತ್ತಿಲ್ಲ. ಅದು ಪ್ರೀಕ್ವೆಲ್‌ ಆದ್ದರಿಂದ ಅಲ್ಲಿ ನನ್ನ ಪಾತ್ರವೇ ಬರುವುದಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಜೊತೆಗೆ ಆ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಇವತ್ತಿಗೂ ಜನ ಆ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ನನಗೆ ಏನೇ ಸಿಕ್ಕಿದರೂ ಅದು ಆ ಸಿನಿಮಾದಿಂದ ಎನ್ನಲು ಸಪ್ತಮಿ ಮರೆಯುವುದಿಲ್ಲ. ಸದ್ಯ ಸಪ್ತಮಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರದ ಪಾತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next