ಮಂಗಳೂರು: ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಪುಣೆ ಮತ್ತು ಎರ್ನಾಕುಲಂ ಜಂಕ್ಷನ್ ಮಧ್ಯೆ ಸಾಪ್ತಾಹಿಕ ಸೂಪರ್ ಫಾಸ್ಟ್ ವಿಶೇಷ ರೈಲನ್ನು ಪರಿಚಯಿಸಲಾಗುತ್ತಿದೆ.
ನಂ. 01049 ಪುಣೆ ಜಂಕ್ಷನ್ ಎರ್ನಾಕುಲಂ ಜಂಕ್ಷನ್ ವೀಕ್ಲಿ ಸೂಪರ್ ಫಾಸ್ಟ್ ವಿಶೇಷ ರೈಲು ಪುಣೆಯಿಂದ ಪ್ರತೀ ಗುರುವಾರ ಸಂಜೆ 6.45ಕ್ಕೆ ಹೊರಟು ಎರ್ನಾಕುಲಂ ಜಂಕ್ಷನ್‌ಗೆ ಮರುದಿನ ಸಂಜೆ 6.50ಕ್ಕೆ ತಲಪುವುದು (ಎ.13ರಿಂದ ಮೇ 25ರ ವರೆಗೆ 7 ಸೇವೆಗಳು).
ಮಂಗಳೂರು ಜಂಕ್ಷನ್‌ಗೆ ಪ್ರತೀ ಶುಕ್ರವಾರ ಬೆಳಗ್ಗೆ 11.10 ಆಗಮನ/11.20 ನಿರ್ಗಮನ, ಕಾಸರಗೋಡು 12.04/12.05, ಕಣ್ಣೂರು 1.17/1.20, ತಲಶೆÏàರಿ 1.39/1.40, ಕೋಯಿಕ್ಕೋಡ್ 2.37/2.40, ತಿರೂರು 3.19/3.20, ಶೋರ್ನೂರು ಜಂಕ್ಷನ್ 4.10/4.15.
ನಂ. 010ಎರ್ನಾಕುಲಂ ಪುಣೆ ವೀಕ್ಲಿ ಸೂಪರ್‌ಫಾಸ್ಟ್ ರೈಲು ಎರ್ನಾಕುಲಂ ಜಂಕ್ಷನ್‌ನಿಂದ ಪ್ರತೀ ಶುಕ್ರವಾರಗಳಂದು ರಾತ್ರಿ 11.25ಕ್ಕೆ ಹೊರಟು ರವಿವಾರಗಳಂದು ಮುಂಜಾನೆ 2.45ಕ್ಕೆ ಪುಣೆ ಜಂಕ್ಷನ್ ತಲುಪುವುದು (ಎ. 14ರಿಂದ ಮೇ 26, 7 ಸೇವೆಗಳು).
ಶೋರ್ನೂರು ಜಂಕ್ಷನ್ ಶನಿವಾರ 1.35/1.40, ತಿರೂರು 2.18/2.20, ಕೋಯಿಕ್ಕೋಡ್ 2.57/3.00, ತಲಶೆÏàರಿ 3.54/3.55, ಕಣ್ಣೂರು 4.23/4.25, ಕಾಸರಗೋಡು 5.23/5.25, ಮಂಗಳೂರು ಜಂಕ್ಷನ್ 6.20/6.30.
ನಿಲುಗಡೆ: ಲೋನಾವಾಲ, ಪನ್ವೇಲ್, ಚಿಪ್ಳೂಣ್, ರತ್ನಾಗಿರಿ, ಕಂಕಾವಿÛ, ಸಾವಂತವಾಡಿ ರೋಡ್, ಮಡಗಾಂವ್ ಜಂಕ್ಷನ್, ಕಾರವಾರ, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ತಲಶೇರಿ, ಕೋಯಿಕ್ಕೋಡ್, ತಿರೂರು, ಶೋರ್ನೂರು ಜಂಕ್ಷನ್ ಮತ್ತು ತೃಶ್ಶೂರ್.