Advertisement

SSE-Side B: ಓಟಿಟಿಯಲ್ಲಿ ಸಿಗುತ್ತಿಲ್ಲ ʼಸಪ್ತ ಸಾಗರದಾಚೆ  ಎಲ್ಲೋʼ ಸೈಡ್‌ -ಬಿʼ; ಕಾರಣವೇನು?

03:13 PM Mar 21, 2024 | Team Udayavani |

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅವರ ʼಸಪ್ತ ಸಾಗರದಾಚೆ  ಎಲ್ಲೋʼ ಸೈಡ್‌ -ಎ, ಬಿʼ  ಕಳೆದ ವರ್ಷ ಪ್ರೇಕ್ಷಕರ ಗಮನ ಸೆಳೆದ ಸಿನಿಮಾಗಳು. ಲವ್‌ ಸ್ಟೋರಿ ಮಾದರಿಯ  ಈ ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್‌ ಅವರ ಅಭಿನಯ ಗಮನ ಸೆಳೆದಿತ್ತು.

Advertisement

ಮನು – ಪ್ರಿಯಾ ಅವರ ಪ್ರೇಮಕಥೆ ಥಿಯೇಟರ್‌ ನಲ್ಲಿ ಸದ್ದು ಮಾಡಿತ್ತು. ʼಸಪ್ತ ಸಾಗರದಾಚೆ  ಎಲ್ಲೋʼ ಸೈಡ್‌ -ಎ ಸಿನಿಮಾ ʼಸೈಡ್‌ – ಬಿʼ ಗಿಂತ ಹೆಚ್ಚು ಗಮನ ಸೆಳೆದಿತ್ತು. ಥಿಯೇಟರ್‌ ನಲ್ಲಿ ತೆರಕಂಡ ಬಳಿಕ ಓಟಿಟಿಯಲ್ಲೂ ಸೈಡ್‌ ಎ ಹೆಚ್ಚು ಸದ್ದು ಮಾಡಿತ್ತು.

ʼಸೈಡ್‌-ಎʼ ಕನ್ನಡದ ಬಳಿಕ ತೆಲುಗಿನಲ್ಲೂ ಡಬ್‌ ಆಗಿ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಇದಾದ ಬಳಿಕ ನವೆಂಬರ್‌ 17 ರಂದು ʼಸಪ್ತ ಸಾಗರದಾಚೆ  ಎಲ್ಲೋʼ ಸೈಡ್‌ – ಬಿ ತೆರೆಕಂಡಿತ್ತು. ಆದರೆ ನಿರೀಕ್ಷೆಗಿಂತ ಸಿನಿಮಾ ಬಹುಬೇಗನೇ ಥಿಯೇಟರ್‌ ನಿಂದ ಮಾಯಾವಾಯಿತು. ಮೊದಲ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್‌ ಎರಡನೇ ಭಾಗಕ್ಕೆ ಸಿಕ್ಕಿಲ್ಲ. ಜನವರಿ 26 ರಿಂದ ಅಮೇಜಾನ್‌ ಪ್ರೈಮ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿತ್ತು.

ಇದನ್ನೂ ಓದಿ: Yuva Trailer: ಕೆಣಕಿದರೆ ಕೆಂಡ.. ಪಕ್ಕಾ ಲೋಕಲ್‌ ಆಗಿ ಆ್ಯಕ್ಷನ್ ಅವತಾರ ತಾಳಿದ ʼಯುವʼ

ಆದರೆ ಇದೀಗ ಅವರ ʼಸಪ್ತ ಸಾಗರದಾಚೆ  ಎಲ್ಲೋʼ ಸೈಡ್‌ -ಬಿʼ ಸಿನಿಮಾ ದಿಢೀರನೇ ಓಟಿಟಿಯಿಂದ ಮಾಯಾವಾಗಿದೆ. ಕಳೆದ ಕೆಲ ದಿನದಂದ ಓಟಿಟಿಯಲ್ಲಿ ಸಿನಿಮಾವನ್ನು ಜನ ಹುಡುಕುತ್ತಿದ್ದಾರೆ. ಮೂಲಗಳ ಪ್ರಕಾರ ಸಣ್ಣ ಅವಧಿವರೆಗೆ ಮಾತ್ರ ಸಿನಿಮಾ ಸ್ಟ್ರೀಮಿಂಗ್‌ ಮಾಡಿಕೊಳ್ಳುವ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಮುಂದೆ ಸಿನಿಮಾ ಜೀ5ಯಲ್ಲಿ ಸ್ಟ್ರೀಮ್‌ ಆಗಲಿದೆ ಎನ್ನಲಾಗಿದೆ.

Advertisement

ಆದರೆ ಈ ಬಗ್ಗೆ ಇದುವರೆಗೆ ಚಿತ್ರತಂಡ ಇದುವರೆಗೆ ಯಾವ ಮಾಹಿತಿಯನ್ನು ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next