Advertisement

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

12:48 PM Apr 20, 2024 | Team Udayavani |

ಕೊಚ್ಚಿ: ಇತ್ತೀಚೆಗೆ ಮಾಲಿವುಡ್‌ ನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿರುವ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ದಿನದ ಕುರಿತು ಮತ್ತೊಮ್ಮೆ ಸುದ್ದಿ ಹಬ್ಬಿದೆ.

Advertisement

ಮಲಯಾಳಂನಲ್ಲಿ ರಿಲೀಸ್‌ ಆಗಿ ಇತ್ತೀಚೆಗಷ್ಟೇ ತೆಲುಗು ಭಾಷೆಗೆ ಡಬ್‌ ಆಗಿ ಆಂಧ್ರದ ರಾಜ್ಯದಲ್ಲೂ ಭರ್ಜರಿ ಗಳಿಕೆ ಕಂಡಿರುವ  ಸರ್ವೈವಲ್ ಥ್ರಿಲ್ಲರ್ ‘ಮಂಜುಮ್ಮೆಲ್ ಬಾಯ್ಸ್’ ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ಕಣ್ಣಲ್ಲಿ ರೋಚಕವಾಗಿ ಮೂಡಿಬಂದಿದೆ.

ಫೆ.22 ರಂದು ತೆರೆಕಂಡು 50 ದಿನಗಳನ್ನು ಪೂರೈಸಿರುವ ಈ ಸಿನಿಮಾ 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಬಾಕ್ಸ್‌ ಆಫೀಸ್‌ ನಲ್ಲಿ 200 ಕೋಟಿಗೂ ಅಧಿಕ ಗಳಿಕೆಯನ್ನು ಕಾಣುವ ಮೂಲಕ ದಾಖಲೆಯನ್ನು ಬರೆದಿದೆ.

ಕುಟ್ಟನ್ (ಶೌಬಿನ್ ಶಾಹಿರ್), ಸುಭಾಷ್ (ಶ್ರೀನಾಥ್ ಬಾಷಿ) ಹಾಗೂ ಅವರ ಸ್ನೇಹಿತರು ಕೊಡೈಕೆನಾಲ್ ಪ್ರವಾಸಕ್ಕೆ ಹೋಗಿ ಅಲ್ಲಿನ ಗುಣ ಗುಹೆಗೆ ಹೋದಾಗ ನಡೆಯುವ ನೈಜ ಕಥೆಯನ್ನು ಥ್ರಿಲ್‌ ಆಗುವ ರೀತಿ ಹೇಳಲಾಗಿದೆ.

ಇದನ್ನೂ ಓದಿ: Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Advertisement

ಥಿಯೇಟರ್‌ ನಲ್ಲಿ ಸಕ್ಸಸ್‌ ಫುಲ್‌ ಆಗಿ ಓಡಿದ ಸಿನಿಮಾ ಓಟಿಟಿ ರಿಲೀಸ್‌ ಡೇಟ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಸಿನಿಮಾ ತೆರೆಕಂಡು 50 ದಿನ ಹೆಚ್ಚಾದರೂ ಓಟಿಟಿಯಲ್ಲಿ ಇನ್ನು ಕೂಡ ರಿಲೀಸ್‌ ಆಗಿಲ್ಲ. ಟಾಲಿವುಡ್‌ ನಲ್ಲಿ ಡಬ್‌ ಆಗಿ ತೆರೆಕಂಡಿದ್ದು,  ಇದೀಗ ಸಿನಿಮಾ ಓಟಿಟಿಗೆ ಬರಲಿದೆ ಎನ್ನಲಾಗುತ್ತಿದೆ.

ಇದೇ ಮೇ.3 ರಂದು ಡಿಸ್ನಿ+ ಹಾಟ್‌ ಸ್ಟಾರ್‌ ನಲ್ಲಿ ‘ಮಂಜುಮ್ಮೆಲ್ ಬಾಯ್ಸ್’ ಸ್ಟ್ರೀಮ್‌ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವ ಮಾಹಿತಿಯೂ ಬಂದಿಲ್ಲ. ಮೂಲಗಳ ಪ್ರಕಾರ ಮೇ.3 ರಂದು ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್‌ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್ ಮತ್ತು ಅರುಣ್ ಕುರಿಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next