Advertisement

ಸಸಿ ಬೆಳೆಸುವ ಕಾರ್ಯಕ್ಕೆ ಚಾಲನೆ

03:08 PM Mar 24, 2017 | |

ಧಾರವಾಡ: ವೃಕ್ಷ (ಸಸಿ) ದಾಸೋಹದ ಅಂಗವಾಗಿ ಸಸಿ ಬೆಳೆಸುವ ಕಾರ್ಯಕ್ರಮಕ್ಕೆ ನಗರದ ತಪೋವನದಲ್ಲಿ ಬುಧವಾರ ಚಾಲನೆ ನೀಡಲಾಯಿತು. ವೃಕ್ಷ ಭಾರತ ಸೇವಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಬೀಜ ಹಾಕುವ ಮೂಲಕ ಚಾಲನೆ ನೀಡಿದರು.

Advertisement

ಮಂಡಳಿಯು ಹೊಂಗೆ, ಹುಣಸೆ, ಕಾಡುಬದಾಮ, ಸಂಕೇಶ್ವರ, ಮಹಾಗನಿ ಮುಂತಾದ ತಳಿಗಳ ಮರಗಳನ್ನು ಬೆಳೆಸಲು ಮುಂದಾಗಿರುವುದಕ್ಕೆ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಶ್ರೀಗಳು, ಡಾ| ಶ್ರೀಶೈಲ ಚೌಗಲಾ ಅವರು ರಚಿಸಿದ ವೃಕ್ಷಕ್ರಾಂತಿ ಕನ್ನಡ ಮತ್ತು ಹಿಂದಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. 

ಮಹೇಶಾನಂದ ಸ್ವಾಮೀಜಿ ಮಾತನಾಡಿ, ಇಂದು ಕೈಗಾರಿಕೆ ಸ್ಥಾಪನೆ, ರಸ್ತೆ, ಕಟ್ಟಡ ನಿರ್ಮಾಣ ಇನ್ನಿತರ ಉದ್ದೇಶಗಳಿಗಾಗಿ ಮರಗಳನ್ನು ನಾಶ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದ ಶುದ್ಧ ಗಾಳಿ, ಮಳೆಯ ಅಭಾವ ಮತ್ತು ಅಂತರ್ಜಲ ಕುಸಿತದಿಂದ ಜೀವಜಲ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮಾನವನ ಮೇಲೆ ಹಲವು ಬಗೆಯಲ್ಲಿ ದುಷ್ಪರಿಣಾಮ ಬೀರುತ್ತಿದೆ.

ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಮರಗಳನ್ನು ಬೆಳೆಸಲು ಪ್ರತಿಯೊಬ್ಬರು ಆಸಕ್ತಿ ತೋರಿಸಬೇಕು. ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ಬೆಳೆಸಿ ವಿತರಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು. ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಶಿವಾಚಾರ್ಯರು, ವಚನಾನಂದ ಸ್ವಾಮೀಜಿ ಇದ್ದರು. ಪೊ| ಶಂಭುಲಿಂಗಪ್ಪ ಹೆಗಡಾಳ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next