Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಾರೆ ಕೆಲಸ ಮಾಡುವವರಿಗೆ, ಕೂಲಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುತ್ತಿದ್ದಾರೆ. ಆದರೆ, ಇಂದಿಗೂ ಮನೆ-ಮನೆಗೆ ಹೋಗಿ ಟಾಯ್ಲೆಟ್ ತೊಳೆಯುವ ನಮ್ಮನ್ನು ಗುರುತಿಸುತ್ತಿಲ್ಲ. ಅಧಿ ಕಾರಿಗಳು ನಮ್ಮನ್ನು ಅಲೆಸುತ್ತಿದ್ದು, ಸಾಕಾಗಿ ಹೋಗಿದೆ. ಹೀಗಾಗಿ ಡಿಸಿ ಕಚೇರಿ ಎದುರೇ ಮಲ ಮೈಮೇಲೆ ಸುರಿದುಕೊಂಡು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು. ನಗರದಲ್ಲಿ ಸಫಾಯಿ ಕರ್ಮಚಾರಿಗಳ 200 ಮನೆಗಳಿವೆ. ಅದರಲ್ಲಿ ಕೇವಲ 6 ಜನರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ. 174 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಧಿಕಾರಿಗಳ ನಡೆಗೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದು, ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
Advertisement
ಗುರುತಿನ ಚೀಟಿ ನೀಡದಿದ್ದರೆ ಮಲ ಸುರಿದುಕೊಂಡು ಹೋರಾಟ
05:40 PM Feb 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.