Advertisement
ಈ ಸೇತುವೆಯು ತೀರಾ ಇಕ್ಕಟ್ಟಾದ ಸ್ಥಿತಿಯಲ್ಲಿ ಮತ್ತು ಯು ಆಕಾರದ ಭಾರೀ ತಿರುವು ಹೊಂದಿರುವುದರಿಂದ ನಿರಂತರ ವಾಹನಗಳ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇದೀಗ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳು ಇದಕ್ಕೆ ಸೇರ್ಪಡೆಗೊಂಡಿವೆ. ಪುತ್ತೂರು ಕಡೆಯಿಂದ ಬರುವ ವಾಹನ ಸವಾರರು ಹೊಂಡ ತಪ್ಪಿಸಲು ಪ್ರಯತ್ನಿಸಿದಾಗ ಎದುರು ಭಾಗದಿಂದ ಯಾವುದೇ ವಾಹನ ಅದರಲ್ಲೂ ದ್ವಿಚಕ್ರ ಸವಾರರು ಬಂದಾಗ ಮಣ್ಣಿನ ರಾಶಿ ಮೇಲೆ ಹತೋಟಿ ತಪ್ಪಿ ಅವಘಡಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮಳೆ ಬರುವ ಸಂದರ್ಭದಲ್ಲಿ ನೀರು ಕೂಡ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ನಿರಂತರ ಅಪಘಾತಗಳು ಸಂಭವವಿಸುವ ಈ ಸೇತುವೆ ಮಧ್ಯೆ ಇರುವ ಹೊಂಡ ಹಾಗೂ ರಸ್ತೆಯ ಮೇಲ್ಭಾಗದಲ್ಲಿ ಅಂಟಿಕೊಂಡಿರುವ ಮಣ್ಣಿನ ರಾಶಿಯಿಂದ ದುರಂತವನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಹೆದ್ದಾರಿ ಇಲಾಖಾಧಿಕಾರಿಗಳು, ಜನಪ್ರತಿನಿಧಿ ಗಮನಿಸಿ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜ ನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ರಸ್ತೆ ಮಧ್ಯೆ ದೊಡ್ಡ ಗಾತ್ರದ ಹೊಂಡ ಹಾಗೂ ಮಳೆ ನೀರು ಹೋಗಲು ಸರಿಯಾದ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಕೊಚ್ಚಿಕೊಂಡು ಬಂದ ಮಣ್ಣಿನ ಗುಡ್ಡವಿರುವುದರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಪಾಯ ತಪ್ಪಿಸಲು
ಪ್ರಯತ್ನಿಸುವ ಸಂದರ್ಭದಲ್ಲೂ ಅಪಘಾತವಾಗಬಹುದು. ಈ ನಿಟ್ಟಿನಲ್ಲಿ ತತ್‌ಕ್ಷಣ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
- ನವೀನ್ ಕಲ್ಲರ್ಪೆ
ದ್ವಿ ಚಕ್ರ ಸವಾರರು