Advertisement
ಜ. 17ರಿಂದ 22ರ ವರೆಗೆ ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ನಡೆಯಲಿದ್ದು, ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಫೈನಲ್ ಪ್ರವೇಶಿಸಲಿವೆ. ಗುಂಪು “ಎ’ದಲ್ಲಿ ಕರ್ನಾಟಕ, ಸರ್ವಿಸಸ್, ತೆಲಂಗಾಣ ಮತ್ತು ಪಾಂಡಿಚೇರಿ ತಂಡಗಳು ಸ್ಥಾನ ಪಡೆದಿವೆ. “ಬಿ’ ಗುಂಪಿನಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್ ತಂಡಗಳು ಸ್ಥಾನ ಪಡೆದಿವೆ. ಪಂದ್ಯದ ಟಿಕೆಟ್ ಬೆಲೆ 100 ರೂ. ಮತ್ತು 50 ರೂ. ನಿಗದಿಪಡಿಸಲಾಗಿದೆ.
ಇಂತಹ ಮಹತ್ವದ ಕೂಟವೊಂದನ್ನು ರಾಜ್ಯದಲ್ಲಿ ನಡೆಸಲು ಅನುವುಮಾಡಿಕೊಟ್ಟ ಅಖೀಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ (ಎಐಎಫ್ಎಫ್) ಧನ್ಯವಾದ ಹೇಳುತ್ತೇನೆ. ನಾವು ಕೂಟವನ್ನು ಯಶಸ್ವಿಯಾಗಿ ನಡೆಸುತ್ತೇವೆ. ರಾಜ್ಯದಲ್ಲಿರುವ ಫುಟ್ಬಾಲ್ ಅಭಿಮಾನಿಗಳ ಪ್ರೋತ್ಸಾಹ ಪಡೆಯುತ್ತೇವೆ. ಈ ಕೂಟ ರಾಜ್ಯದಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳೆಯಲು ಅನುಕೂಲ ಮಾಡಲಿದೆ.
ಎನ್.ಎ. ಹ್ಯಾರೀಸ್, ಕೆಎಸ್‌ಎಫ್ಎ ಅಧ್ಯಕ್ಷ