ಶಹಾಬಾದ: ಸಮಾಜದ ಏಳ್ಗೆಗಾಗಿ ತ್ಯಾಗಮಯಿ ಜೀವನ ನಡೆಸಿದ ತ್ಯಾಗವೀರ ಸಂತೋಷ ಇಂಗಿನಶೆಟ್ಟಿ ಅವರ ತ್ಯಾಗ ಸ್ಮರಣಾರ್ಹ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಶುಕ್ರವಾರ ನಗರದ ಶ್ರೀಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಆವರಣದಲ್ಲಿ ವೈದ್ಯರು, ವ್ಯಾಪಾರಸ್ಥರು ಅಭಿಮಾನಿ ಬಳಗದ ವತಿಯಿಂದ ಹೈಕ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ದಿ. ಸಂತೋಷಕುಮಾರ ಇಂಗಿನಶೆಟ್ಟಿ ಅವರ ದ್ವಿತೀಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಬದುಕುವುದರೊಂದಿಗೆ ಸಮಾಜದಲ್ಲಿರುವ ಹಲವಾರು ಸಂಘ, ಸಂಸ್ಥೆಗಳಿಗೆ, ಉದಯೋನ್ಮುಖ ಬರಹಗಾರರಿಗೆ, ಕವಿಗಳಿಗೆ ಹಾಗೂ ಕಷ್ಟದಲ್ಲಿರುವ ಜನರಿಗೆ ದಾನಿಗಳಾಗಿ ಸಮಾಜಮುಖೀಯಾಗಿ ಬದುಕಿನ ಸಾರ್ಥಕ ಜೀವನ ನಡೆಸಿದವರು ಅವರು. ಶ್ರೀಮಂತ ಮನೆತನದವರಾಗಿದ್ದರೂ ಮಾನವೀಯ ಮೌಲ್ಯಗಳನ್ನು ಹೊಂದಿದ ಸಾಕಾರಮೂರ್ತಿ ಆಗಿದ್ದರು ಎಂದರು.
ಮುಗುಳನಾಗಾವಿ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಯಾರು ಜಾತಿಯನ್ನು ಮೀರಿ ಸಮಾಜಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಡುತ್ತಾರೆಯೋ ಅವರು ಮಹಾನ್ ವ್ಯಕ್ತಿಯಾಗುತ್ತಾರೆ.ಅಂಥವರ ಸಾಲಿನಲ್ಲಿ ಸಂತೋಷ ಇಂಗಿನಶೆಟ್ಟಿ ಒಬ್ಬರು ಎಂದು ಹೇಳಿದರು. ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ದೇವಸ್ಥಾನದ ಪೂಜ್ಯ ಅಪ್ಪಾರಾವ್ ದೇವಿ ಮುತ್ಯಾ ಆಶೀರ್ವಚನ ನೀಡಿದರು, ಡಾ| ಶರಣಬಸಪ್ಪ ಹರವಾಳಕರ ಮಾತನಾಡಿದರು. ಕಾಂಗ್ರೆಸ್ ಯುವ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ, ಉದ್ಯಮಿ ಹಣಮಂತರಾವ್ ಇಂಗಿಶೆಟ್ಟಿ, ಡಾ| ಶರಣಗೌಡ ಪಾಟೀಲ, ಡಾ| ಕಾಮರೆಡ್ಡಿ, ಡಾ| ಆನಂದ ಗಾರಂಪಳ್ಳಿ, ಡಾ| ಕಾರಬಾರಿ, ಬಿಕೆಡಿಪಿ ಅಧ್ಯಕ್ಷ ವೈಜನಾಥ ತಡಕಲ್, ಬಿಸಿಸಿ ಅಧ್ಯಕ್ಷ ಡಾ| ಎಂ.ಎ.ರಶೀದ, ಯುವರಾಜ ಚಿಂಚೋಳಿ, ವೀರಣ್ಣ ಹೊನ್ನಳ್ಳಿ, ಸಾಹಿತಿ ಡಾ| ಪಿ.ಎಸ್. ಕೋಕಟನೂರ ಹಾಜರಿದ್ದರು. ಅಖೀಲ ಭಾರತ ವೀರಶೈವ ಮಹಾಸಭಾ ನಗರ ಘಟಕದ ಅಧ್ಯಕ್ಷ ಅನಿಲ ಮರಗೋಳ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಡಾ| ಪಿ.ಎಸ್. ಕೋಕಟನೂರ ಬರೆದ “ನಾಗಾವಿ ನಾಡಿನ ಮರೆಯದ ಮಾಣಿಕ್ಯ ದಿ.ಸಂತೋಷಕುಮಾರ ಇಂಗಿನಶೆಟ್ಟಿ’ ಪುಸ್ತಕ ಮತ್ತು 2018 ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಯಶೋಧಾ ಪ್ರಾರ್ಥಿಸಿದಳು,