Advertisement

Emergency ನಂತರ ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಗಮನ ಕೊಟ್ಟಿಲ್ಲ: ನಾರಾಯಣಮೂರ್ತಿ

04:00 PM Aug 19, 2024 | Team Udayavani |

ಪ್ರಯಾಗ್‌ ರಾಜ್(ಉತ್ತರಪ್ರದೇಶ): ಭಾರತದಲ್ಲಿ ಹೆಚ್ಚಳವಾಗುತ್ತಿರುವ ಜನಸಂಖ್ಯೆ ಕುರಿತು ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್‌ ಸಹ-ಸಂಸ್ಥಾಪಕ ಎನ್‌ ಆರ್‌ ನಾರಾಯಣಮೂರ್ತಿ ಅವರು, ತುರ್ತು ಪರಿಸ್ಥಿತಿಯ ನಂತರ ಭಾರತೀಯರು ಜನಸಂಖ್ಯೆ ನಿಯಂತ್ರಣ ಮಾಡಲು ಯಾವುದೇ ಗಮನಹರಿಸಿಲ್ಲ ಎಂದು ಹೇಳಿದರು.

Advertisement

ಅವರು ಭಾನುವಾರ (ಆ.18) ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಮೋತಿಲಾಲ್‌ ನೆಹರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವೇಳೆ ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಭಾರತವು ಜನಸಂಖ್ಯೆ ಹೆಚ್ಚಳದಿಂದ ಗುರುತರ ಸಮಸ್ಯೆಯನ್ನು ಎದುರಿಸುವಂತಾಗಿದೆ, ತಲಾದಾಯ ಭೂಮಿ ಲಭ್ಯತೆ ಹಾಗೂ ಆರೋಗ್ಯ ಸೇವೆಯ ಅಗತ್ಯದ ಕೊರತೆ ಎದುರಿಸುತ್ತಿದೆ ಎಂದು ನಾರಾಯಣಮೂರ್ತಿ ತಿಳಿಸಿದರು.

“ತುರ್ತು ಪರಿಸ್ಥಿತಿ ಸಮಯದಿಂದ ಈವರೆಗೂ ನಾವು ಭಾರತೀಯರು ಜನಸಂಖ್ಯೆ ನಿಯಂತ್ರಣದ ಬಗ್ಗೆ ಗಮನ ಹರಿಸಿಲ್ಲ. ಇದರಿಂದಾಗಿ ನಮ್ಮ ದೇಶದ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ. ಉದಾಹರಣೆಗೆ ಅಮೆರಿಕ, ಬ್ರೆಜಿಲ್‌ ಹಾಗೂ ಚೀನಾದ ತಲಾದಾಯ ಭೂಮಿ ಲಭ್ಯತೆ ಅಧಿಕ ಪ್ರಮಾಣದಲ್ಲಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ನಿಜವಾದ ವೃತ್ತಿಪರರ ಹೊಣೆಗಾರಿಕೆಯಾಗಿದೆ” ಎಂದು ನಾರಾಯಣ ಮೂರ್ತಿ ಹೇಳಿದರು.

Advertisement

ಮುಂದಿನ ತಲೆಮಾರಿನ ಬದುಕು ಸುಧಾರಣೆಯಾಗಲು ಒಂದು ಜನರೇಶನ್‌ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ನನ್ನ ತಂದೆ, ತಾಯಿ, ಸಹೋದರರು, ಶಿಕ್ಷಕರು ನನ್ನ ಏಳಿಗೆಗಾಗಿ ಗಮನಾರ್ಹ ತ್ಯಾಗ ಮಾಡಿದ್ದರು. ಅವರ ತ್ಯಾಗ ವ್ಯರ್ಥವಾಗಲಿಲ್ಲ‌ ಎನ್ನುವುದಕ್ಕೆ ನಾನು ಇಂದು ನಿಮ್ಮ ಮುಂದೆ ಮುಖ್ಯ ಅತಿಥಿಯಾಗಿ ನಿಂತಿರುವುದೇ ಸಾಕ್ಷಿಯಾಗಿದೆ ಎಂದು ನಾರಾಯಣಮೂರ್ತಿ ಸಲಹೆ ನೀಡಿದರು.

ಇದನ್ನೂ ಓದಿ:Shivanna 131: ಶಿವರಾಜ್ ಕುಮಾರ್ ಶೂಟಿಂಗ್‌ ಸೆಟ್‌ಗೆ ನಟ ಯಶ್‌ ಭೇಟಿ; ಫೋಟೋಸ್ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next