Advertisement

ವಿನಯ ಇಲ್ಲದ ಪಾಂಡಿತ್ಯ ವ್ಯರ್ಥ: ಬಸವಲಿಂಗ ಸ್ವಾಮೀಜಿ

04:57 PM Jul 04, 2018 | |

ಹುಬ್ಬಳ್ಳಿ: ಬದುಕಿನಲ್ಲಿ ಉತ್ತಮ ಜೀವನ ನಡೆಸಲು ವಿದ್ಯೆ ಬೇಕೆ ಹೊರತು, ಉದ್ಯೋಗಕ್ಕಾಗಿ ವಿದ್ಯೆ ಕಲಿಯುವುದು ಬೇಡ ಎಂದು ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. ಘಂಟಿಕೇರಿ ಬಸವಣ್ಣ ದೇವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಂತ ಶ್ರೀ ಶಿಶುನಾಳ ಶರೀಫ‌ರ 199ನೇ ಜಯಂತ್ಯುತ್ಸವ ಹಾಗೂ 129ನೇ ಸ್ಮರಣ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಂದು ವಿದ್ಯೆಗೆ ಹೆಚ್ಚಿನ ಬೆಲೆ ಇದೆ. ಆದರೆ ಆ ವಿದ್ಯೆಗೆ ವಿನಯ ನೀಡುವುದು ಅವಶ್ಯ. ವಿನಯ ಇಲ್ಲದ ವಿದ್ಯೆ ಇದ್ದರೆಷ್ಟು ಬಿಟ್ಟರೆಷ್ಟು ಎಂದರು.

Advertisement

ಉದ್ಯೋಗ ಇರುವವನಿಗೆ ಕನ್ಯೆ ನೀಡಬೇಕೆಂಬುದು ಎಲ್ಲರ ಹಂಬಲ. ಆದರೆ ಒಕ್ಕಲುತನ ಮಾಡುವವನಿಗೆ ಕನ್ಯೆ ಇಲ್ಲವಾಗಿವೆ. ಒಕ್ಕಲಿಗೆ ಸರಿಯಾಗಿದ್ದರೆ ಎಲ್ಲವೂ ಸರಿ ಎನ್ನುವುದು ಹಿಂದಿನಿಂದ ಬಂದ ನಾಣ್ಣುಡಿ. ಆದರೆ ಇಂದು ಅದೇ ಒಕ್ಕಲಿಗ ಇನ್ನೊಬ್ಬ ಒಕ್ಕಲಿಗನಿಗೆ ತನ್ನ ಮಗಳನ್ನು ನೀಡುವುದಿಲ್ಲ, ಬದಲಾಗಿ ಉದ್ಯೋಗ ಇರುವವನಿಗೆ ಕನ್ಯೆ ನೀಡುತ್ತೇನೆ ಎನ್ನುತ್ತಾನೆ. ಕಸ ಹೊಡೆಯುವವನಿಗೆ ನೀಡುತ್ತೇನೆ, ಆದರೆ ಒಕ್ಕಲುತನ ಮಾಡುವವನಿಗೆ ನೀಡುವುದಿಲ್ಲ ಎನ್ನುವ ಸ್ಥಿತಿಯಲ್ಲಿ ನಮ್ಮ ದೇಶ ಉದ್ಧಾರ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕವಿವಿ ಕನ್ನಡ ಪ್ರಾಧ್ಯಾಪಕ ಡಾ| ಬಸವರಾಜ ನಾಗವ್ವನವರ ಉಪನ್ಯಾಸ ನೀಡಿ, ಭಾವ ಎಂದರೆ ಜೀವನ, ಅನುಭಾವ ಎಂದರೆ ಹೊಸ ಜೀವನ. ಅಖಂಡ ಧಾರವಾಡ ಜಿಲ್ಲೆ ಸಂತ-ದಾರ್ಶನಿಕರನ್ನು ಕಂಡ ಜಿಲ್ಲೆ. ಆದರೆ ಇಂದು ಕೊಲೆ-ಸುಲಿಗೆಯ ಜಿಲ್ಲೆಯಾಗುತ್ತಿರುವುದು ವಿಷಾದನಿಯ ಸಂಗತಿ. ಹೆಣ್ಣು, ಹೊನ್ನು, ಮಣ್ಣನ್ನು ಯಾವತ್ತೂ ನಮ್ಮ ಸಂಪತ್ತಾಗಿ ನೋಡಬಾರದು. ಇದರ ಕುರಿತು ಅತಿಯಾದ ಮೋಹ ಬೇಡ ಎಂದು ಸಂತ ಶ್ರೀ ಶಿಶುನಾಳ ಶರೀಫ‌ರು ಅಂದೇ ತಿಳಿಸಿದ್ದರು. ಆದರೆ ಇಂದು ಎಲ್ಲರೂ ಆ ಮೂರರ ಬೆನ್ನು ಬಿದ್ದಿದ್ದಾರೆ ಎಂದರು. ಎ.ಎಲ್‌. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅಂದಾನಪ್ಪ ಸಜ್ಜನರ, ಶೇಖಣ್ಣ ಬೆಂಡಿಗೇರಿ, ತಾರಾದೇವಿ ವಾಲಿ, ಶಿವಯೋಗಿ ವನಹಳ್ಳಿಮಠ, ಮಲ್ಲಿಕಾರ್ಜುನ ನರೇಂದ್ರಮಠ, ವಿಶ್ವನಾಥ ಕಕ್ಷಿಟಗೇರಿ, ಶಾವು ಗಾವಡೆ, ಗಂಗಾಧರ ನರೇಂದ್ರಮಠ, ಎಸ್‌.ಬಿ. ಮಠದ, ಎಸ್‌. ನೀಲಗಾರ, ಈಶ್ವರ ಶ್ಯಾವಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next