Advertisement

Kiccha Sudeep: ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನು ಫ್ಯಾನ್ಸ್‌ ಮಾಡಿಲ್ಲ; ಕಿಚ್ಚ

03:20 PM Sep 02, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeep) ಅಭಿಮಾನಿಗಳ ಜತೆ ತನ್ನ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತನ್ನ ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಾ, ಬರ್ತ್‌ ಡೇ ವಿಶ್‌ ಮಾಡಿ, ನಟನ ಮುಂದೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

Advertisement

ಹುಟ್ಟುಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಅಭಿಮಾನಿಗಳು ಮನೆ ಮುಂದೆ ನೆರವೇರುವ ಕಾರಣದಿಂದ ಸುದೀಪ್‌ ಅವರು ಜಯನಗರದ ಎಂಇಎಸ್ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಕಿಚ್ಚ ಅವರು ಮಾತನಾಡಿದ್ದಾರೆ, “ನಾನಿಂದು ತಲೆ ಎತ್ತಿ ನಡೆಯುತ್ತಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಸೆಪ್ಟೆಂಬರ್ 2ರಂದು ಎಲ್ಲರೂ ಬರುತ್ತಾರೆ. ಆದರೆ ಸೆ.1ರ ರಾತ್ರಿ 12 ಗಂಟೆಗೆ ಬರುವ ಕೂಗನ್ನು ಕೇಳಿದಾಗ, ನಮ್ಮನ್ನು ಇನ್ನಷ್ಟು ತಗ್ಗಿ-ಬಗ್ಗಿ ಇರುವಂತೆ ಮಾಡುತ್ತದೆ” ಎಂದಿದ್ದಾರೆ.

content-img

ನಾವು ಬೆಳಗ್ಗೆ ಎದ್ದು ಮೇಕಪ್‌ ಹಾಕಿಕೊಳ್ಳುವುದೇ ನಿಮಗಾಗಿ. ಲೈಫ್‌ನಲ್ಲಿ ಯಾರೂ ಕಾಂಪ್ರಮೈಸ್ ಆಗಬೇಡಿ. ಪ್ರೀತಿ ಹಾಗು ಒಳ್ಳೆತನ ತೋರಿಸುವುದಕ್ಕೂ ಕಾಂಪ್ರಮೈಸ್ ಆಗಬೇಡಿ. ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನೂ ಇವರು (ಫ್ಯಾನ್ಸ್​​) ಮಾಡಿಲ್ಲ. ಮಾಡೋದು ಇಲ್ಲ. ಅದು ಬಹಳ ಮುಖ್ಯ ಆಗುತ್ತದೆ. ಸಿನಿಮಾ ನಾವು ಎಲ್ಲರೂ ಮಾಡುತ್ತೇವೆ. ಆದರೆ ಸಕ್ಸಸ್‌ ನಾನು ಒಬ್ಬನ್ನೇ ಅಲ್ಲ. ಕನ್ನಡ ಚಿತ್ರರಂಗದಲ್ಲಿರುವಂತಹ ಎಷ್ಟೋ ಕಲಾವಿದರು, ದೊಡ್ಡ ದೊಡ್ಡ ಕಲಾವಿದರು, ಬಂದಂತಹ ಕಲಾವಿದರು, ಪ್ರತಿಯೊಬ್ಬರು ಒಂದು ದೊಡ್ಡ ದೊಡ ಸಿನಿಮಾಗಳನ್ನು ಕೊಡುತ್ತಾರೆ. ಸಕ್ಸಸ್‌ ಫುಲ್‌ ನಾಯಕ ನಟರಾಗುತ್ತಾರೆ. ಆದರೆ ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದ್ರೆ ಬರೀ ಫಿಲ್ಮ್ ಮಾಡಿದರೆ ಸಾಕಾಗಲ್ಲ. ನನ್ನ ಅಕ್ಕಪಕ್ಕದಲ್ಲಿರುವ ಕುಟುಂಬ, ಫ್ಯಾನ್ಸ್​​, ಫ್ರೆಂಡ್ಸ್​ ನನ್ನೊಂದಿಗೆ ಚೆನ್ನಾಗಿದ್ದಾರೆ ಅದಕ್ಕೆ ನಾನು ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

Advertisement

ನನ್ನ ಅಭಿಮಾನಿಗಳು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ನನ್ನಿಂದಲೇ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುತ್ತದೆ. ಅವರ ಒಳ್ಳೆಯತನ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಸಲ್ಲಬೇಕು. ಅಭಿಮಾನಿಗಳು ನಮ್ಮ ಪ್ರತಿಬಿಂಬ ಆಗಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ.

ಸುದೀಪ್‌ ಹುಟ್ಟುಹಬ್ಬದಂದು ʼಮ್ಯಾಕ್ಸ್‌ʼ ಸಿನಿಮಾದ ʼಮ್ಯಾಕ್ಸಿಮಾಮ್‌ ಮಾಸ್‌ʼ ಹಾಡು, ಬಿಲ್ಲ ರಂಗ ಬಾಷʼದ ಟೈಟಲ್‌ ಲೋಗೋ ಕಾನ್ಸೆಪ್ಟ್‌ ವಿಡಿಯೋ ರಿಲೀಸ್‌ ಆಗಿರುವುದು ಅಭಿಮಾನಿಗಳ ಪಾಲಿಗೆ ಹಬ್ಬದೂಟ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.