ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ವತಿಯಿಂದ ನಿರಂತರ 24 ತಾಸುಗಳ ಭಜನಾ ಕಾರ್ಯಕ್ರಮವು ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸನ್ನಿಧಿಯಲ್ಲಿ ಜೂ. 23 ರಂದು ಚಾಲನೆಗೊಂಡಿತು.
ಮುಂಜಾನೆ ಸುರ್ಯೋದಯ ವೇಳೆಗೆ ಏಕಾಹ ಭಜನಾ ಕಾರ್ಯಕ್ರಮಕ್ಕೆ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉದ್ಯಮಿಗಳಾದ ಮಾಧವ ಎನ್. ಪೂಜಾರಿ, ಕೆ. ಎಂ. ಸುವರ್ಣ, ನವೀನ್ ಕುಮಾರ್ ಸುವರ್ಣ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಶ್ರೀ ರವೀಂದ್ರ ಎ. ಶಾಂತಿ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಅಸೋಸಿಯೇಶನಿನ ಗುರುನಾರಾಯಣ ಭಜನಾ ಮಂಡಳಿ ಕೇಂದ್ರ ಕಾರ್ಯಾಲಯ, ಕೇಂದ್ರ ಕಾರ್ಯಾಲಯದ ಮಹಿಳಾ ವಿಭಾಗ, 22 ಸ್ಥಳೀಯ ಕಚೇರಿಗಳ ಭಜನಾ ಮಂಡಳಿಗಳು ಹಾಗೂ ಮುಂಬಯಿ ಮಹಾ ನಗರದ ಪ್ರಸಿದ್ದ ಭಜನಾ ಮಂಡಳಿಗಳಾದ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮೀರಾರೋಡ್, ಶ್ರೀ ದತ್ತಾತ್ರೇಯ ದುರ್ಗಾಂಬಿಕ ಭಜನಾ ಮಂಡಳಿ ಅಸಲ್ಫಾ, ಶ್ರೀ ಗೀತಾಂಬಿಕ ಭಜನಾ ಮಂಡಳಿ ಘಾಟ್‌ಕೋಪರ್, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ, ಶ್ರೀ ಕೃಷ್ಣ ನಿತ್ಯಾನಂದ ಭಜನಾ ಮಂಡಳಿ ಭಾಂಡುಪ್, ಶ್ರೀ ಜಗದಂಬಾ ಕಾಲಭೈರವ ಭಜನಾ ಮಂಡಳಿ ಜೋಗೇಶ್ವರಿ, ಶ್ರೀ ಗೋಕುಲ ಸಯನ್ ಭಜನಾ ಮಂಡಳಿ, ಶ್ರೀ ವಿದ್ಯಾದಾಯಿನಿ ಸಭಾ ಭಜನಾ ಮಂಡಳಿ ಫೋರ್ಟ್, ಶ್ರೀ ನಿತ್ಯಾನಂದ ಭಜನಾ ಮಂಡಳಿ ಸಹಕಾರ್‌ವಾಡಿ, ಶ್ರೀ ಕುಂದಾಪುರ ಬಿಲ್ಲವ ಸಂಘ ಮುಂಬಯಿ ಭಜನಾ ಮಂಡಳಿ, ಶ್ರೀ ಸೀತಾರಾಮ ಭಜನಾ ಮಂಡಳಿ ಕಮಾನಿ, ಶ್ರೀ ರಾಮಕೃಷ್ಣ ಭಜನಾ ಮಂಡಳಿ ಕೊಂಡಿವೀಟಾ, ಶ್ರೀ ಮಹಾಕಾಳಿ ಭಜನಾ ಮಂಡಳಿ ಸಾಂತಕ್ರೂಜ್, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅದಾರ್ ವಿಲೇಪಾರ್ಲೆ, ಶ್ರೀ ಮಣಿಕಂಠ ಭಜನಾ ಮಂಡಳಿ ಸಾಕಿನಾಕಾ ಮುಂತಾದ 37 ಮಂಡಳಿಗಳು ಭಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಅಸೋಸಿಯೇಶನ್‌ನ ಸಂಚಾಲಕತ್ವದ ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್. ಪೂಜಾರಿ, ನ್ಯಾಯವಾದಿ ಎಸ್. ಬಿ. ಅಮೀನ್, ಮಾಜಿ ನಿರ್ದೇಶಕ ಎನ್. ಎಂ. ಲಕ್ಷಿ¾à ಕೋಟ್ಯಾನ್, ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಮೋಹನದಾಸ್ ಜಿ. ಪೂಜಾರಿ, ಶ್ರೀನಿವಾಸ ಎಸ್. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಸ್ಥಳೀಯ ಉದ್ಯಮಿಗಳು ಪಾಲ್ಗೊಂಡಿದ್ದರು. ಜೂ. 24 ರಂದು ಮುಂಜಾನೆ ಏಕಾಹ ಭಜನ ಕಾರ್ಯಕ್ರಮದ ಮಂಗಳ್ಳೋತ್ಸವ ನಡೆಯಲಿದೆ ಎಂದು ಅಸೋಸಿಯೇಶನ್‌ನ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಚಿತ್ರ-ವರದಿ : ರೊನಿಡಾ, ಮುಂಬಯಿ