ಮುಂಬಯಿ: ನಲಸೋಪರ ಮತ್ತು ನೇವಿ ನಗರದಲ್ಲಿ ಆ. 8ರಂದು ಸಂತ ನಿರಂಕಾರಿ ಮಿಷನ್ ಆಯೋಜಿಸಿದ ರಕ್ತದಾನ ಶಿಬಿರ ಗಳಲ್ಲಿ 449 ಮಂದಿ ರಕ್ತದಾನಗೈದು ಮಾನವೀಯತೆ ಮೆರೆದರು.
ನೇವಿ ನಗರ ನಿರಂಕಾರಿ ಸತ್ಸಂಗ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 200 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸಂತ ನಿರಂಕಾರಿ ಬ್ಲಿಡ್ ಬ್ಯಾಂಕ್‌ನವರು ಸಹಕರಿಸಿದರು. ನಲಸೋಪರದ ನಿರಂಕಾರಿ ಸತ್ಸಂಗ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ನಾಯರ್ ಆಸ್ಪತ್ರೆಯ ಬ್ಲಿಡ್ ಬ್ಯಾಂಕ್‌ನವರು 137 ಯುನಿಟ್ ರಕ್ತವನ್ನು ಸಂಗ್ರಹಿಸಿದರು. ನೇವಿ ನಗರದ ಶಿಬಿರವನ್ನು ವಿಭಾಗದ ಸೆಕ್ಟರ್ ಸಂಚಾಲಕ ಬಾಬು ಬಾಯಿ ಪಂಚಾಲ್‌ಜೀ ಉದ್ಘಾಟಿಸಿದರು.
ಸ್ಥಳೀಯ ಶಾಸಕರಾದ ರಾಹುಲ್ ನರ್ವೇಕರ್ ಶಿಬಿರಕ್ಕೆ ಭೇಟಿ ನೀಡಿ ಸಂತ ನಿರಂಕಾರಿ ಮಿಷನ್ ಸೇವಾ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೇವಾದಳದ ಅಧಿಕಾರಿಗಳು, ವಿಭಾಗದ ಸ್ಥಳೀಯ ನಿರ್ವಹಣ ಸದಸ್ಯರು ಉಪಸ್ಥಿತರಿದ್ದರು.ನಲಸೋಪರದ ಶಿಬಿರವನ್ನು ವಿಭಾಗದ ನಾಸಿಕ್ ವಲಯದ ಪ್ರಾದೇಶಿಕ ಉಸ್ತುವಾರಿ ಜನಾರ್ದನ ಪಾಟೀಲ್ ಉದ್ಘಾಟಿಸಿದರು.
ಇದನ್ನೂ ಓದಿ:ನಟಿ ರಾಧಿಕಾ ‘ಇಂಟಿಮೇಟ್’ ಫೋಟೋ ವಿರುದ್ಧ ನೆಟ್ಟಿಗರು ಆಕ್ರೋಶ : ಬಹಿಷ್ಕಾರಕ್ಕೆ ಆಗ್ರಹ
ಸಾಮಾಜಿಕ ಕಾರ್ಯಕರ್ತ ನಿಲೇಶ್ ಚೌಧರಿ ಶುಭ ಹಾರೈಸಿದರು. ಸಂತ ನಿರಂಕಾರಿ ಸೇವಾ ದಳದ ಅನೇಕ ಪದಾಧಿಕಾರಿಗಳು, ಸ್ಥಳೀಯ ವ್ಯವಸ್ಥಾಪಕರು ಶಿಬಿರದಲ್ಲಿ ಪಾಲ್ಗೊಂಡರು. ಸೇವಾದಳದ ಅಧಿಕಾರಿಗಳು, ಸಂತ ನಿರಂಕಾರಿ ಚಾರಿಟೆಬಲ್ ಫೌಂಡೇಶನ್‌ನ ಸ್ವಯಂಸೇವಕರು ಸಂಯುಕ್ತವಾಗಿ ಈ ಎರಡು ಶಿಬಿರಗಳನ್ನು ಆಯೋಜಿಸಿದ್ದರು