Advertisement

ಮಧ್ಯಪ್ರದೇಶದಲ್ಲಿ 1ರಿಂದ 12ನೇ ತರಗತಿ ವರೆಗೆ ಸಂಸ್ಕತ ಕಡ್ಡಾಯ: ವರದಿ

04:31 PM Mar 30, 2017 | Team Udayavani |

ಭೋಪಾಲ್‌ : ಬಿಜೆಪಿ ಆಡಳಿತೆ ಇರುವ ಮಧ್ಯಪ್ರದೇಶದಲ್ಲಿ ಒಂದರಿಂದ ಹನ್ನೆರಡನೇ ತರಗತಿ ವರೆಗೆ ಸಂಸ್ಕೃತವನ್ನು ಕಡ್ಡಾಯ ಮಾಡಲು ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ಬಯಸಿದ್ದಾರೆ. 

Advertisement

ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಸ್ತಾವವನ್ನು ಮಧ್ಯಪ್ರದೇಶದ ಸಂಸ್ಕೃತ ಮಂಡಳಿಯು ಶೀಘ್ರವೇ ಶಾಲಾ ಶಿಕ್ಷಣ ಇಲಾಖೆಗೆ ಕಳುಹಿಸಲಿದೆ ಎಂದು ನ್ಯೂಸ್‌ 18 ಡಾಟ್‌ ಕಾಂ ವರದಿ ಮಾಡಿದೆ. 

ಈ ಪ್ರಸ್ತಾವ ಒಂದೊಮ್ಮೆ ಅನುಷ್ಠಾನವಾದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಸೇರುವ ಪುಟಾಣಿಗಳು ಸಂಸ್ಕತ ಭಾಷೆಯನ್ನು ಕಲಿಯಬೇಕಾಗುತ್ತದೆ. 

ಶಾಲೆಗಳಲ್ಲಿ ಸಂಸ್ಕೃತವನ್ನು ಕಲಿಸಬೇಕೆಂಬ ಪ್ರಸ್ತಾವವನ್ನು ಮೊದಲ ಬಾರಿಗೆ ಮುಂದಿಟ್ಟವರು ಸಂಸ್ಕೃತ ಮಂಡಳಿಯ ಉಪಾಧ್ಯಕ್ಷ ಡಾ. ಮನಮೋಹನ್‌ ಉಪಾಧ್ಯಾಯ. 

Advertisement

Udayavani is now on Telegram. Click here to join our channel and stay updated with the latest news.

Next