Advertisement

ಸಂಸ್ಕೃತ ಗ್ರಾಮ ನೆನಪಷ್ಟೆ? 

09:30 AM Oct 13, 2017 | |

ಭೋಪಾಲ್‌:  ಇಪ್ಪತ್ತು ವರ್ಷಗಳ ಹಿಂದಕ್ಕೆ ಹೊರಳಿಕೊಳ್ಳಬೇಕು. ಮಧ್ಯ ಪ್ರದೇಶದ ನರ ಸಿಂಗಪುರ ಜಿಲ್ಲೆಯ ಮೊಹಾಡ್‌ ಗ್ರಾಮದಲ್ಲಿ ಸಂಸ್ಕೃತವನ್ನೇ ಮಾತನಾಡಲಾಗುತ್ತಿತ್ತು. ಹೀಗಾಗಿ ಅದು ದೇಶದ “ಮೊದಲ ಸಂಸ್ಕೃತ ಗ್ರಾಮ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಈಗ ಆ ಖ್ಯಾತಿ ನಿಧಾನಕ್ಕೆ ಮರೆಯಾಗತೊಡಗಿದೆ. 

Advertisement

ಗ್ರಾಮದ ಹಿರಿಯ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿ ರಾಧೇಶ್ಯಾಮ್‌ ನರೋಲಿಯಾ ಹೇಳುವಂತೆ 1996ರಲ್ಲಿ ದೇವ ಭಾಷೆಯ ಬೆಳವಣಿಗೆಗೆ ಭಾರೀ ಸಹಕಾರ ಮತ್ತು ಒತ್ತು ನೀಡಲಾ ಯಿತು. ಆರ್‌ಎಸ್‌ಎಸ್‌ನಲ್ಲಿದ್ದ ಇಬ್ಬರು ಕಾರ್ಯಕರ್ತರು ಭಾಷೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ್ದರು. ಒಂದು ವರ್ಷದ ಅವಧಿಯಲ್ಲಿ ಗ್ರಾಮದ ಚಿತ್ರಣವೇ ಬದಲಾಗಿ ಸಂಸ್ಕೃತವೇ ಮೊದಲ ಭಾಷೆ ಎಂಬ ಖ್ಯಾತಿಗೆ ಪಾತ್ರವಾಯಿತು. ಜತೆಗೆ ಸಾಕ್ಷರತೆ ಪ್ರಮಾಣವೂ ಶೇ.70ಕ್ಕೆ ಏರಿಕೆಯಾಯಿತು. 

ಗ್ರಾಮದ ಎಲ್ಲ ಜನಾಂಗಗಳನ್ನೂ ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಪ್ರಭಾವ ಎಲ್ಲಿಯವರೆಗೆ ಬೀರಿತ್ತು ಎಂದರೆ ಹಿಂದಿ ಭಾಷೆಗೆ ಕೂಡ ಪ್ರಥಮ ಆದ್ಯತೆ ಇರಲಿಲ್ಲ. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ ಸಂಸ್ಕೃತ ಮಾತನಾಡುವ ಜನರೂ ಕಡಿಮೆಯಾಗಿದ್ದಾರೆ. ವಿಶೇಷವಾಗಿ ದಲಿತ ಮತ್ತು ಹಿಂದುಳಿದ ವರ್ಗದವರು 20 ವರ್ಷಗಳಿಂದ ತಾವು ಸಂಸ್ಕೃತ ಮಾತನಾಡು ತ್ತಿದ್ದರೂ ಮುಖ್ಯವಾಹಿನಿಗೆ ತಮ್ಮನ್ನು ಸೇರಿಸಿ ಲ್ಲವೆಂದು ಅವರೂ ಈಗ ಭಾಷೆಯತ್ತ ಗಮನ ಹರಿಸುತ್ತಿಲ್ಲ. 5 ಸಾವಿರ ಮಂದಿ ಇರುವ ಗ್ರಾಮ ದಲ್ಲಿ 150 ಮಂದಿ ಮಾತ್ರ ಈಗ ಸಂಸ್ಕೃತ ಮಾತಾಡುತ್ತಿದ್ದಾರೆ. 8 ವರ್ಷಗಳ ಹಿಂದೆ ಮಧ್ಯ ಪ್ರದೇಶ ಸರಕಾರ ಶಾಲೆ ನಿರ್ಮಾಣದ ವಾಗ್ಧಾನ ಮಾಡಿತ್ತು. ಅದು ಇನ್ನೂ ಕೈಗೂಡಿಲ್ಲ. 

 

Advertisement

Udayavani is now on Telegram. Click here to join our channel and stay updated with the latest news.

Next